ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಮಂಗಳವಾರ, 10–11–1970

Last Updated 9 ನವೆಂಬರ್ 2020, 19:30 IST
ಅಕ್ಷರ ಗಾತ್ರ

ರಕ್ಷಣಾ ಶಾಖೆ ರಹಸ್ಯ ವರದಿ ಬ್ರಿಟಿಷ್‌ ಗ್ರಂಥಕರ್ತನಿಗೆ ಬಯಲಾದ ಬಗ್ಗೆ ಆಕ್ರೋಶ

ನವದೆಹಲಿ, ನ. 9– ಬ್ರಿಟಿಷ್‌ ಲೇಖಕ ನವಿಲ್‌ ಮಾಕ್ಸ್‌ವೆಲ್‌ ಅವರ ‘ಇಂಡಿಯಾಸ್‌ ಚೈನಾ ವಾರ್‌’ ಎಂಬ ಪುಸ್ತಕಕ್ಕೆ ವಸ್ತುವನ್ನು ಯಾರು ಒದಗಿಸಿದರೆಂಬ ಪ್ರಶ್ನೆಯನ್ನು ಪರಿಶೀಲಿಸಿ ‘ಸಾಧ್ಯವಾದಷ್ಟು ಶೀಘ್ರವೇ’ ಕ್ರಮ ತೆಗೆದುಕೊಳ್ಳುವುದಾಗಿ ರಕ್ಷಣಾ ಸಚಿವ ಶ್ರೀ ಜಗಜೀವನರಾಂ ಅವರು ಇಂದು ಲೋಕಸಭೆಗೆ ಭರವಸೆ ಕೊಟ್ಟರು.

ಮಾಕ್ಸ್‌ವೆಲ್‌ ಅವರು ಅನುಮತಿ ಪಡೆದಿದ್ದರೇ, ಇಲ್ಲದಿದ್ದರೆ ಲೇಖಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶ್ರೀನಾಥ್‌ ಪೈ ಪ್ರಶ್ನಿಸಿದ್ದರು.

ಪ್ರಸ್ತುತ ಅಧಿವೇಶನ ಕಾಲದಲ್ಲೇ ಸಂಸತ್‌ ಸಮಿತಿ ರಚನೆ?

ನವದೆಹಲಿ, ನ. 9– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಪರಿಶೀಲನೆಗಾಗಿ ಪ್ರಸ್ತುತ ಸಂಸತ್‌ ಅಧಿವೇಶನದ ಕಾಲದಲ್ಲೇ ಸಂಸತ್‌ ಸಮಿತಿಯೊಂದನ್ನು ರಚಿಸುವ ನಿರೀಕ್ಷೆಯಿದೆ.

ಸಮಿತಿಯನ್ನು ರಚಿಸುವಂತೆ ಲೋಕಸಭೆ ಮತ್ತು ರಾಜ್ಯಸಭೆಯ ಅಧ್ಯಕ್ಷರುಗಳನ್ನು ಕೋರುವ ನಿರ್ಣಯವೊಂದನ್ನು ಸರ್ಕಾರ ಶೀಘ್ರದಲ್ಲೇ ತರಲಿದೆಯೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT