ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 24–10–1968

Last Updated 23 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಪ್ರಥಮ ಬೃಹತ್ ಸಮರನೌಕೆ ‘ನೀಲಗಿರಿ’ ಜಲಯಾನ

ಮುಂಬೈ, ಅ. 23– ‘ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸ್ಥಾಪಿಸುವ ಆಶೆ– ಆಕಾಂಕ್ಷೆಗಳೇನೂ ಭಾರತಕ್ಕೆ ಇಲ್ಲ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಘೋಷಿಸಿದರು.

ಭಾರತದಲ್ಲಿ ತಯಾರಿಸಲಾದ ಪ್ರಥಮ ಸಬ್‌ ಮೆರಿನ್‌ ನಿರೋಧಕ ಹಾಗೂ ಸರ್ವೋದ್ದೇಶದ ಲಿಯಾಂಡರ್‌ ವರ್ಗದ ಬೃಹತ್‌ ಸಮರನೌಕೆ ‘ನೀಲಗಿರಿ’ಯನ್ನು ಇಂದು ಮಧ್ಯಾಹ್ನ 12.20ಕ್ಕೆ ಜಲಯಾನಕ್ಕೆ ತೊಡಗಿಸುತ್ತಾ ‘ಅಧಿಕಾರ ಅಥವಾ ಶಕ್ತಿಯ ಹಾಗೂ ಪ್ರಭಾವದ ಕ್ಷೇತ್ರಗಳಲ್ಲಿ ನಮಗೆ ನಂಬಿಕೆ ಇಲ್ಲ’ ಎಂದೂ ಅವರು ನುಡಿದರು.

ಈರುಳ್ಳಿ ಮಹಿಮೆ

ನವದೆಹಲಿ, ಅ. 23– ದಿನಕ್ಕೆ ಒಂದು ಈರುಳ್ಳಿ ತಿನ್ನುವುದರಿಂದ ದಂತ ವೈದ್ಯರ ಅಗತ್ಯವೇ ಇರದು!

ದಂತಕ್ಷಯಕ್ಕೆ ಹಾಗೂ ಇತರ ದಂತ ರೋಗಗಳಿಗೆ ಕಾರಣವಾದ ಕ್ರಿಮಿಗಳನ್ನು ಈರುಳ್ಳಿಯಲ್ಲಿರುವ ಕೆಲವು ವಸ್ತುಗಳು ನಾಶಪಡಿಸುವುದೇ ಇದಕ್ಕೆ ಕಾರಣ.

ಈ ಅಂಶ ಇತ್ತೀಚಿನ ಸಂಶೋಧನೆಗಳಿಂದ ವ್ಯಕ್ತಪಟ್ಟಿದೆ.

‘ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಕ್ರಿಮಿಗಳನ್ನು ಕೊಲ್ಲುವುದಕ್ಕೆ ಮೂರು ನಿಮಿಷಗಳ ಕಾಲ ಒಂದು ಈರುಳ್ಳಿಯನ್ನು ಅಗಿದರೆ ಸಾಕು’ ಎಂಬುದು ರಷ್ಯ ವಿಜ್ಞಾನಿ ಬಿ.ಪಿ. ಟೋಕಿನ್ ಅಭಿಪ್ರಾಯ. ಅವರೇ ಈ ಬಗ್ಗೆ ಸಂಶೋಧನೆ ನಡೆಸಿದರು.

ದಾವಣಗೆರೆ ಅತಿ ದುಬಾರಿ ನಗರ

ಬೆಂಗಳೂರು, ಅ. 23– ಸೆಪ್ಟೆಂಬರ್ ತಿಂಗಳಲ್ಲಿ ಜೀವನ ವೆಚ್ಚ ಏರಿಕೆ ಸೂಚ್ಯಂಕಗಳ ವರದಿ ಪ್ರಕಾರ ದಾವಣಗೆರೆ, ರಾಜ್ಯದಲ್ಲಿ ಅತಿ ದುಬಾರಿ ಪಟ್ಟಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT