ಮನೆ, ಮನ ತುಂಬಿದಾಗ...
ಬೆಂಗಳೂರು, ಡಿ.1– ಶತಮಾನ ಕಾಲ ಬಾಳಲಿ, ಸವರ ಸ್ಫೂರ್ತಿ ಅಖಂಡವಾಗಿ ಉಳಿಯಲಿ– ಹಾರೈಕೆ ಹೊಮ್ಮಿ ಹರಡಿತ್ತು.

‘ಅವರ ಪಾದದ ಮೇಲೆ ಇಟ್ಟು ಧನ್ಯ’ರಾದರು ಪ್ರೊ.ವಿ.ಕೃ. ಗೋಕಾಕ್.

ವೇದಿಕೆಯ ಮೇಲೆ ‘ದೇವರ ಹಾಗೆ’ ಕುಳಿತಿದ್ದವರು ಎದ್ದು ‘ನಿಮಗೆಲ್ಲ ನಮಸ್ಕಾರ’ ಎಂದರು.

ಕೂಟ ಮುಗಿಯುತ್ತ ಬಂದಂತೆಲ್ಲ ಗೌರವ ಹಾಗೂ ಕೃತಜ್ಞತೆಯ ಭಾರ ಹೆಚ್ಚಾಗುತ್ತಿತ್ತು. ಯಾವುದೋ ಸುಪ್ತ ಆವೇಶ. ನೆರೆದಿದ್ದ ಕಿರಿಯರೆಲ್ಲ ಕಾಲು ಮುಟ್ಟಿ ನಮಸ್ಕಾರ ಮಾಡಿದರು.

ಕನ್ನಡಕ್ಕೆ ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ನೀಡಿದ 79ವರ್ಷ ವಯಸ್ಸಿನ ಡಿ.ವಿ.ಜಿ. ಅವರಿಗೆ ರಾಷ್ಟ್ರಪ್ರಶಸ್ತಿ ಸಮರ್ಪಣೆಯಾಗಿತ್ತು.

ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ತಡೆಯಿಂದ ವಿಶ್ವಶಾಂತಿಗೆ ಗಂಡಾಂತರ
ನವದೆಹಲಿ, ಡಿ.1– ಜನಸಂಖ್ಯೆ ಆಸ್ಫೋಟನೆಗಿಂತ ವಾಣಿಜ್ಯದಲ್ಲಿ ಉಂಟಾದ ಕೃತಕ ತಡೆಗಳೇ ಹೆಚ್ಚಾಗಿ ವಿಶ್ವಶಾಂತಿಗೆ ಬೆದರಿಕೆಯನ್ನೊಡ್ಡಿವೆ ಎಂದು ಪ್ರಖ್ಯಾತ ಭೂಗೋಳ ಶಾಸ್ತ್ರಜ್ಞರು ಇಂದು ಇಲ್ಲಿ ಹೇಳಿದರು.

ಅಭಿವೃದ್ಧ ರಾಷ್ಟ್ರಗಳ ಮಾರುಕಟ್ಟೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕಚ್ಚಾ ಉತ್ಪನ್ನಗಳು ಪ್ರವೇಶಿಸುವುದು ಕಷ್ಟಕರವಾಗುವಂತೆ ಮಾಡುವುದೇ ಈ ಕೃತಕ ತಡೆಗಳ ಉದ್ದೇಶ ಎಂದೂ ಹೇಳಿದರು.

ಗಣಿಗಳಿಗೆ ಸ್ಫೋಟಕ ನೇರ ಪೂರೈಕೆ
ಬೆಂಗಳೂರು, ಡಿ. 1– ಲೋಹ ಮತ್ತು ಖನಿಜಗಳ ಮಾರಾಟ ಕಾರ್ಪೊರೇಷನ್ ಬರುವ ಜನವರಿ ಅಂತ್ಯದಿಂದ ಹೊಸಪೇಟೆ– ಬಳ್ಳಾರಿ ಪ್ರದೇಶದಲ್ಲಿ ಗಣಿ ಕೈಗಾರಿಕೋದ್ಯಮಿಗಳಿಗೆ ನೇರವಾಗಿ ನಿಯಂತ್ರಿತ ದರಗಳಲ್ಲಿ ಸ್ಫೋಟಕ ವಸ್ತುಗಳನ್ನು ಒದಗಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.