ಶುಕ್ರವಾರ, ಡಿಸೆಂಬರ್ 4, 2020
21 °C

ಪ್ರಜಾವಾಣಿ 25 ವರ್ಷಗಳ ಹಿಂದೆ: ಮಂಗಳವಾರ, 14–11–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರಿನಿಂದ ದೆಹಲಿವರೆಗೆ ಹಬ್ಬಿದ ವೈದ್ಯಕೀಯ ಸೀಟು ವಂಚನೆ ಜಾಲ

ತುಮಕೂರು, ನ. 13– ಇಲ್ಲಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವ ಭರವಸೆ ನೀಡಿ ಇಬ್ಬರಿಂದ 14 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಇಬ್ಬರು ಯುವಕರನ್ನು ತುಮಕೂರು ಪೊಲೀಸರು ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಬಂಧಿಸಿದ್ದಾರೆ.

ಆರೋಪಿಗಳಿಂದ ಸುಮಾರು 20 ಲಕ್ಷ ರೂಪಾಯಿಯ ಡಿಮಾಂಡ್‌ ಡ್ರಾಫ್ಟ್‌, ಬೆಂಗಳೂರು ವಿಶ್ವವಿದ್ಯಾಲಯ ಮತ್ತಿತರ ಶಿಕ್ಷಣ ಸಂಸ್ಥೆಗಳ ಲೆಟರ್‌ಹೆಡ್‌, ಹೈ ಕಮಿಷನರ್‌ಗಳ ಪತ್ರ ಮೊದಲಾದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ದೇಶದಾದ್ಯಂತ, ಮುಖ್ಯವಾಗಿ ಉತ್ತರದ ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ವಂಚನೆಯ ಜಾಲದ ಕೇಂದ್ರ ಕಚೇರಿ ರಾಜಧಾನಿಯಲ್ಲಿದ್ದು, ಅಲ್ಲಿನ ವಂಚಕರನ್ನು ಬಂಧಿಸಲು ಪೊಲೀಸ್‌ ತನಿಖಾದಳ ದೆಹಲಿಗೆ ತೆರಳಿದೆ. ಪೊಲೀಸರು ವಶಪಡಿಸಿಕೊಂಡ ಡಿಮಾಂಡ್‌ ಡ್ರಾಫ್ಟ್‌ನಲ್ಲಿ ಮೂರು, ಕಲ್ಬುರ್ಗಿಯ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸೊಸೈಟಿಗೆ ಸೇರಿದ್ದಾಗಿದ್ದು, ಒಂದು, ಬೆಂಗಳೂರಿನ
ದಂತ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ್ದು.

ವೈದ್ಯ ಸೇವೆ ಗ್ರಾಹಕ ಕಾಯ್ದೆ ವ್ಯಾಪ್ತಿಗೆ

ನವದೆಹಲಿ, ನ. 13 (ಯುಎನ್‌ಐ)– ವೈದ್ಯಕೀಯ ಸೇವೆಯು ಗ್ರಾಹಕ ರಕ್ಷಣಾ ಕಾಯ್ದೆ ಅಡಿಯ ಸೇವಾ ವಿಭಾಗದಲ್ಲಿ ಒಳಗೊಳ್ಳುವುದು ಎಂದು ಸುಪ್ರೀಂ ಕೋರ್ಟ್‌ ಇಂದು ಐತಿಹಾಸಿಕ ತೀರ್ಪು ನೀಡಿದೆ.

ಉಚಿತ ಚಿಕಿತ್ಸೆ ಅಥವಾ ವೈಯಕ್ತಿಕ ಗುತ್ತಿಗೆ ಸೇವೆಗಳ ಹೊರತಾಗಿ ಉಳಿದಂತೆ ವೈದ್ಯರು ನೀಡುವ ಎಲ್ಲಾ ತರದ ಸೇವೆಗಳು ಈ ಕಾಯ್ದೆ ವ್ಯಾಪ್ತಿಗೆ ಸೇರುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು