ಸೋಮವಾರ, ನವೆಂಬರ್ 30, 2020
26 °C

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ, 18–11–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 years back

ಯುದ್ಧ ಸಲಕರಣೆ: ದೇಶೀಯ ಉತ್ಪಾದನೆಗೆ ಪ್ರಧಾನಿ ಸಲಹೆ

ಬೆಂಗಳೂರು, ನ. 17– ಯುದ್ಧವಿಮಾನಗಳೂ ಸೇರಿದಂತೆ ಸಮರ ಸಲಕರಣೆಗಳ ನಿರ್ಮಾಣದಲ್ಲಿ ವಿದೇಶಿ ತಂತ್ರಜ್ಞಾನದ ಅವಲಂಬನೆ ಆತ್ಮಹತ್ಯಕಾರಿ ನಿಲುವಾದೀತು ಎಂದು ವಿಜ್ಞಾನಿ ಸಮುದಾಯ ಮತ್ತು ತಂತ್ರಜ್ಞರಿಗೆ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಎಚ್ಚರಿಸಿದರು.

ಇಲ್ಲಿನ ಎಚ್‌ಎಎಲ್ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು 22 ದಶಲಕ್ಷ ಡಾಲರ್ ಅಂದಾಜು ವೆಚ್ಚದ ಹಗುರ ಯುದ್ಧ ವಿಮಾನ ಎಲ್‌ಸಿಎ, ಡಿಡಿ–1ರ ನೆಲಮಟ್ಟದ ಪರೀಕ್ಷಾ ಪ್ರಯೋಗಕ್ಕೆ ಚಾಲನೆ ನೀಡಿ, ಮಾತನಾಡುತ್ತಿದ್ದ ಪ್ರಧಾನಿ ‘ಭಾರತದಲ್ಲಿ ಜಾರಿಗೆ ಬಂದಿರುವ ಉದಾರೀಕರಣ ನೀತಿಯ ಪ್ರಯೋಜನ ಸಮರ ಕ್ಷೇತ್ರದಲ್ಲಿ ಅಗತ್ಯವಿರುವ ತಂತ್ರಜ್ಞಾನದ ಆಮದಿಗೆ ಪ್ರಯೋಜನವಾಗುವುದಿಲ್ಲ ಎನ್ನುವುದನ್ನು ನಮ್ಮ ವಿಜ್ಞಾನಿಗಳು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಅಯೋಧ್ಯೆ ಪ್ರಕರಣ: ಡಿ. 6ರಿಂದ ವಿಚಾರಣೆ ಪುನರಾರಂಭ

ನವದೆಹಲಿ. ನ. 17 (ಪಿಟಿಐ)– ಅಯೋಧ್ಯೆಯ ವಿವಾದಾತ್ಮಕ ಕಟ್ಟಡವನ್ನು ನಾಶಗೊಳಿಸಿದ ಸಂಬಂಧ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ
ಕಲ್ಯಾಣ್ ಸಿಂಗ್, ಅವರ ಸರ್ಕಾರದ
ಉನ್ನತ ಅಧಿಕಾರಿಗಳು ಹಾಗೂ ಬಿಜೆಪಿ ಮತ್ತು ವಿಎಚ್‌ಪಿ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿರುವ ದೂರುಗಳ ಮೇಲಿನ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಡಿಸೆಂಬರ್ 6ರಂದು ಪುನರಾರಂಭ
ಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು