ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಬುಧವಾರ, 15–11–1995

Last Updated 15 ನವೆಂಬರ್ 2020, 19:30 IST
ಅಕ್ಷರ ಗಾತ್ರ

ವೀರಪ್ಪನ್‌ ಪ್ರಕರಣ: ದ್ವಂದ್ವದಲ್ಲಿ ಸರ್ಕಾರ

ಈರೋಡ್‌, ನ. 15 (ಪಿಟಿಐ, ಯುಎನ್‌ಐ)– ಒತ್ತೆಯಾಳುಗಳ ಬಿಡುಗಡೆಗೆ ಮೂರು ಕೋಟಿ ರೂಪಾಯಿಗಳನ್ನು ನೀಡಬೇಕೆಂಬ ತನ್ನ ಷರತ್ತಿಗೆ ಪ್ರತಿಕ್ರಿಯಿಸಲು ತಮಿಳುನಾಡು ಸರ್ಕಾರಕ್ಕೆ ವೀರಪ್ಪನ್‌ ನೀಡಿರುವ ಗಡುವು ಇಂದು ಸಂಜೆಗೆ ಅಂತ್ಯವಾಗಿದ್ದು, ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದೆ.

ಈ ಸಮಸ್ಯೆಯನ್ನು ನಿವಾರಿಸಲು ಮುಂದಿನ ಕಾರ್ಯಯೋಜನೆಯ ಬಗೆಗೆ ಸರ್ಕಾರ ಯೋಚಿಸುತ್ತಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವೀರಪ್ಪನ್‌ಗೆ ಹಣ ನೀಡುವ ಕುರಿತು ಸರ್ಕಾರದೊಳಗೆ ಭಿನ್ನಾಭಿಪ್ರಾಯಗಳಿವೆ.

ಈ ಮಧ್ಯೆ, ಒತ್ತೆಯಾಳುಗಳ ರಕ್ಷಣೆಗಾಗಿ ಪೊಲೀಸ್‌ ಪಡೆ ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕೆ ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.

ಹಣ ಹೊರುವ ರಹಸ್ಯ

ಮ್ಯೂನಿಚ್‌, ನ. 15 (ಎಪಿ)– ಇಲ್ಲಿ 80 ವರ್ಷದ ಮಹಿಳೆಯೊಬ್ಬಳು ಹಣದ ಹೊರೆ ಹೊತ್ತು ವಾಕಿಂಗ್‌ ಹೋಗುತ್ತಾಳೆ.

ಬ್ಯಾಂಕ್‌ನಲ್ಲಿ ವಿಶ್ವಾಸ ಇಲ್ಲದ ಈಕೆ ತನ್ನ ಜೀವಾವಧಿ ಉಳಿತಾಯವನ್ನು ಸದಾ ಹೊತ್ತು ತಿರುಗಾಡುತ್ತಾಳೆ. ಸುಮಾರು 1.18 ಲಕ್ಷ ಡಾಲರ್‌ಗಳನ್ನು ಹೊತ್ತು ಷಾಪಿಂಗ್‌ಗೆ ಬಂದಾಗ ಆಶ್ಚರ್ಯಚಕಿತನಾದ ಕ್ಯಾಷಿಯರ್ ಪೊಲೀಸರಿಗೆ ತಿಳಿಸಿ, ವಿಚಾರಿಸಿದಾಗ ರಹಸ್ಯ ಬಯಲಾಯಿತು.

ಜಿಲ್ಲಾ ಕಾಂಗೈ ಸಮಿತಿ ರಚನೆಗೆ ಕಸರತ್ತು

ನವದೆಹಲಿ, ನ. 15– ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ನಾಯ್ಕರ್‌ ಅವರು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಪುನರ್‌ರಚನೆ ಪಟ್ಟಿಯನ್ನು ಎಐಸಿಸಿ ಒಪ್ಪಿಗೆಗಾಗಿ ಸಲ್ಲಿಸಿದ್ದು ಅದರ ಬಗೆಗೆ ದೆಹಲಿಯಲ್ಲೀಗ ಲಾಬಿ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT