ವಿದ್ಯುತ್ ವೈಫಲ್ಯ: ಅಂಧಕಾರದಲ್ಲಿ ಮುಳುಗಿದ ಉತ್ತರದ ರಾಜ್ಯಗಳು

ಕಾನ್ಪುರ, ಜ. 2 (ಯುಎನ್ಐ, ಪಿಟಿಐ)– ನಗರದ ಹೊರವಲಯದ ಪಂಕಿ ವಿದ್ಯುತ್ ಕೇಂದ್ರದಲ್ಲಿ ಎರಡು ಲೈನ್ಗಳು ಇಂದು ಬೆಳಗಿನ ಜಾವ ಟ್ರಿಪ್ ಆದ ಕಾರಣ ಉತ್ತರ ವಿದ್ಯುತ್ ಜಾಲದಿಂದ ವಿದ್ಯುತ್ ಪಡೆಯುವ ಉತ್ತರ ಪ್ರದೇಶ, ಮಧ್ಯಪ್ರವೇಶ, ರಾಜಸ್ತಾನ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವಾರು ರಾಜ್ಯಗಳು ಗಾಢಾಂಧಕಾರದಲ್ಲಿ ಮುಳುಗಿದವು.

ಈ ಭಾರೀ ವಿದ್ಯುತ್ ವೈಫಲ್ಯದಿಂದಾಗಿ ಉತ್ತರ ಭಾರತದಲ್ಲಿ ರೈಲು ಸಂಚಾರ ಹಲವು ಗಂಟೆವರೆಗೆ ಸ್ತಬ್ಧಗೊಂಡಿದ್ದೇ ಅಲ್ಲದೆ ಆಸ್ಪತ್ರೆ, ನೀರು ಸರಬರಾಜು ಮತ್ತು ದೂರವಾಣಿ ಸೇವೆಗಳಿಗೆ ತೀವ್ರ ಅಡಚಣೆ ಉಂಟಾಯಿತು. ವಿದ್ಯುತ್ ವೈಫಲ್ಯದಿಂದ ರೈಲ್ವೆ ಸಿಗ್ನಲ್ಗಳೂ ಕಾರ್ಯ ನಿರ್ವಹಿಸಲಿಲ್ಲ.

ಮೀಸಲಾತಿ: ರಾಜ್ಯಪಾಲರಿಗೆ ಸರ್ಕಾರದ ಸ್ಪಷ್ಟನೆ ಶೀಘ್ರ

ಬೆಂಗಳೂರು, ಜ. 2– ಗ್ರಾಮೀಣ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ಉದ್ಯೋಗದಲ್ಲಿ ಶೇ 25ರಷ್ಟು ಸ್ಥಾನಗಳನ್ನು ಮೀಸಲಿರಿಸಿ ಸರ್ಕಾರ ರೂಪಿಸಿದ ಮಸೂದೆಯನ್ನು ಎಲ್ಲ ಸ್ಪಷ್ಟೀಕರಣಗಳೊಂದಿಗೆ ರಾಜ್ಯಪಾಲರಿಗೆ ಸರ್ಕಾರ ಕಳಿಸಲಿದೆ.

ಈ ಕಾಯ್ದೆ ರೂಪಿಸಲು ಶಾಸಕಾಂಗಕ್ಕೆ ಅಧಿಕಾರವಿದೆಯೇ, ಅದು ಸಂವಿಧಾನ ಬದ್ಧವಾಗಿದೆಯೇ ಎಂಬ ಅಂಶಗಳನ್ನೊಳಗೊಂಡ ಕೆಲವು ಸ್ಪಷ್ಟೀಕರಣಗಳನ್ನು ರಾಜ್ಯಪಾಲರಾದ ವಿ.ಎಸ್. ರಮಾದೇವಿ ಅವರು, ರಾಜ್ಯ ಸರ್ಕಾರವನ್ನು ಕೇಳಿ ಮಸೂದೆಯನ್ನು ವಾಪಸು ಕಳಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಉತ್ತರ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.