ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಬುಧವಾರ ಸೆಪ್ಟೆಂಬರ್‌ 18,1996

Last Updated 17 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಸಂದರ್ಶನ ಆರಂಭಿಸಲು ಸಿಇಟಿಗೆ ಅನುಮತಿ

ಬೆಂಗಳೂರು, ಸೆ. 17– ವೃತ್ತಿ ಶಿಕ್ಷಣದ ಪ್ರವೇಶಕ್ಕೆ ವಿದ್ಯಾರ್ಥಿಗಳ ಸಂದರ್ಶನ (ಕೌನ್ಸೆಲಿಂಗ್) ಪ್ರಕ್ರಿಯೆ ಪ್ರಾರಂಭಿಸಲು ಹೈಕೋರ್ಟ್‌ ಇಂದು ತಾಂತ್ರಿಕ ಶಿಕ್ಷಣ ಇಲಾಖೆಯ ಸಾಮಾನ್ಯ ಪ್ರವೇಶ ಪರೀಕ್ಷಾ
(ಸಿಇಟಿ) ವಿಭಾಗಕ್ಕೆ ಅನುಮತಿ ನೀಡಿತು.

ಸಂದರ್ಶನದ ವಿಳಂಬ ತಪ್ಪಿಸಲು, ಅಡ್ವೋಕೇಟ್‌ ಜನರಲ್‌ ಅವರ ಕೋರಿಕೆ ಮೇರಿಗೆ ಇಂದು ತಾತ್ಕಾಲಿಕ ಆಜ್ಞೆ ನೀಡಿದ ನ್ಯಾಯಮೂರ್ತಿ ಜಿ.ಸಿ.ಭರೂಕ ಅವರು, ‘ಪ್ರವೇಶ ಸಂಖ್ಯೆಯು ಹೈಕೋರ್ಟಿನ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಕಾಲೇಜಿನವರು 1993ರಲ್ಲಿ ವೃತ್ತಿ ಶಿಕ್ಷಣ ಪ್ರವೇಶ ನೀಡಿರುವಲ್ಲಿ ಅನ್ಯಾಯ ನಡೆದಿದೆ ಎಂದು ಹೈಕೋರ್ಟಿಗೆ ಬರೆದ ಪತ್ರವನ್ನು ಹೈಕೋರ್ಟ್‌ ರಿಟ್‌ ಅರ್ಜಿಯಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದು, ವಾದ ಪ್ರತಿವಾದ ಮುಕ್ತಾಯವಾಗಿದೆ. ಗುರುವಾರ ಅಥವಾ ಶುಕ್ರವಾರ ತೀರ್ಪು ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT