ಗುರುವಾರ , ಆಗಸ್ಟ್ 5, 2021
24 °C

50 ವರ್ಷಗಳ ಹಿಂದೆ| ಸೋಮವಾರ, 19–7–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ತಿಗೆ ನೀಡುವ ಪರಿಹಾರಕ್ಕೆ ನ್ಯಾಯಾಲಯದ ವ್ಯಾಪ್ತಿ ಬೇಡ: ಕಾನೂನು ತಜ್ಞರ ಅಭಿಪ್ರಾಯ

ನವದೆಹಲಿ, ಜುಲೈ 18– ಸ್ವಾಧೀನ ಪಡಿಸಿಕೊಳ್ಳುವ ಆಸ್ತಿಗೆ ಪರಿಹಾರದ ಪ್ರಮಾಣ ನಿರ್ಧರಿಸುವ ಅಧಿಕಾರವನ್ನು ಸಂಸ್ತ್ತಿಗೆ ನೀಡುವಂತೆ ಹಾಗೂ ಅಂಥ ಪರಿಹಾರ ಸಾಕೇ ಎಂಬುದನ್ನು ಯಾವ ನ್ಯಾಯಾಲಯದಲ್ಲಿಯೂ ಪ್ರಶ್ನಿಸಲಾಗದಂತೆ ಸಂವಿಧಾನಕ್ಕೆ ತಿದ್ದಪಡಿ ತರಬೇಕೆಂದು ಆಡಳಿತ ಕಾಂಗ್ರೆಸ್ಸಿನ ಸಂಸತ್‌ ಸದಸ್ಯರು ಹಾಗೂ ಕಾನೂನು ತಜ್ಞರನೇಕರು ಇಂದು ಅಪೇಕ್ಷಿಸಿದರು.

ಜನತೆಯ ಅಶೋತ್ತರ ಪೂರೈಸಲು ಸಂಸತ್ತಿನ ಚುನಾಯಿತ ಜನತಾ ಪ್ರತಿನಿಧಿಗಳಿಗೆ ಅಂಥ ಅಧಿಕಾರವಿರಬೇಕು ಎಂದು ಆಡಳಿತ ಕಾಂಗ್ರೆಸ್‌ ಸಂಸತ್‌ ಪಕ್ಷ ಏರ್ಪಡಿಸಿರುವ ‘ನಮ್ಮ ಸಂವಿಧಾನ ಹಾಗೂ ಸಮಾಜ ಸುಧಾರಣೆ’ ವಿಷಯ ಕುರಿತ ವಿಚಾರಗೋಷ್ಠಿಯ 2ನೇ ದಿನವಾದ ಇಂದು ಬಹುತೇಕ ಭಾಷಣಕಾರರು ನುಡಿದರು. ಅವರಲ್ಲಿ ಕೆಲವರು, ಪರಿಹಾರ ನೀಡಿಕೆಯನ್ನೇ ವಿರೋಧಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು