ಆಂಧ್ರ ಚಂಡಮಾರುತ: 400 ಮಂದಿ ಸಾವು

ಹೈದರಾಬಾದ್, ನ. 7(ಪಿಟಿಐ)– ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಬೀಸಿದ ಭೀಕರ ಚಂಡಮಾರುತಕ್ಕೆ ಕನಿಷ್ಠ 400 ಜನರು ಬಲಿಯಾಗಿದ್ದಾರೆ.

ಪೂರ್ವ ಗೋದಾವರಿ ಜಿಲ್ಲೆಯ ಕೋಟಿಪಲ್ಲ ಮತ್ತು ಎದುರ್ಲಂಕಗಳ ಮಧ್ಯೆ ಗೋದಾವರಿ ನದಿಯಲ್ಲಿ ಪ್ರಯಾಣಿಕರ ದೋಣಿಯೊಂದು ಮುಳುಗಿ ಅದರಲ್ಲಿದ್ದ ಎಲ್ಲ 42 ಜನರು ಜಲಸಮಾಧಿಯಾದ್ದಾರೆ. ಸಾವು ಹಾಗೂ ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಿರುವ ಸಾಧ್ಯತೆಗಳಿವೆ ಎಂದು ಮುಖ್ಯಕಾರ್ಯದರ್ಶಿ ರಾಜಾಜಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಪೂರ್ವ ಗೋದಾವರಿ ಜಿಲ್ಲೆಯ ನರ್ಸಾಪುರ ಮತ್ತು ಕೋವೂರು ಎಂಬ ಗ್ರಾಮಗಳು ಪೂರ್ಣ ನೆಲಸಮವಾಗಿವೆ.

ಆಡಳಿತ ಚುರುಕಿಗೆ ಪಟೇಲ್ ಸಂಪುಟ ಸಂಕಲ್ಪ

ಬೆಂಗಳೂರು, ನ. 7– ರಾಜ್ಯದಲ್ಲಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತೆ ಆಡಳಿತವನ್ನು ಚುರುಕು ಗೊಳಿಸುವುದರ ಜೊತೆಗೆ ಇಲ್ಲಿವರೆಗಿನ ಸಾಧನೆ– ವೈಫಲ್ಯಗಳನ್ನು ವಿಮರ್ಶಿಸಿ ಆತ್ಮಾವಲೋಕ ಮಾಡಿಕೊಂಡು ಎಲ್ಲರೂ ಏಕತೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸಲು ಜೆ.ಎಚ್. ಪಟೇಲ್ ನೇತೃತ್ವದ ಮಂತ್ರಿಮಂಡಲ ಸಂಕಲ್ಪ ತೊಟ್ಟ ಅಪರೂಪದ ಸಭೆ ನಗರದ ಹೊರವಲಯದಲ್ಲಿ ಇಂದು ನಡೆಯಿತು.

ಯಾರೇ ಒಬ್ಬ ಶಾಸಕ ಅಥವಾ ಮಂತ್ರಿಗಳು ಜಾತಿ ಆಧಾರದ ಮೇಲೆ ಸಭೆಗಳನ್ನು ಮಾಡಬಾರದು. ಅದರ ಬದಲಿಗೆ ಜಿಲ್ಲಾ ಅಭಿವೃದ್ಧಿ ಆಧಾರಿತ ಅಥವಾ ತಾಲ್ಲೂಕು ಮಟ್ಟದ ಸಮಸ್ಯೆಗಳ ಬಗ್ಗೆ ಸಭೆಗಳನ್ನು ನಡೆಸಿ ಅವುಗಳ ಪರಿಹಾರಕ್ಕಾಗಿ ಶ್ರಮಿಸಲಿ. ಜಿಲ್ಲಾ ಮಂತ್ರಿಗಳು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ತಾಲ್ಲೂಕು ಮಟ್ಟದಲ್ಲೂ ಪರಿಶೀಲನಾ ಸಭೆಗಳನ್ನು ನಡೆಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು ಎಂದು ತೀರ್ಮಾನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.