ಶುಕ್ರವಾರ, ಡಿಸೆಂಬರ್ 3, 2021
26 °C
50 ವರ್ಷಗಳ ಹಿಂದೆ ಮಂಗಳವಾರ 26.10.1971

50 ವರ್ಷಗಳ ಹಿಂದೆ ಮಂಗಳವಾರ 26.10.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನ ಕಾವೇರಿ ಯೋಜನೆ ಕಾಮಗಾರಿ ತಡೆಯಲು ನಕಾರ

ನವದೆಹಲಿ, ಅ. 25– ಕಾವೇರಿ ಮತ್ತು ಅದರ ಉಪನದಿಗಳಾದ ಕಪಿಲಾ ಹಾಗೂ ಹೇಮಾವತಿ ಯೋಜನೆ ಕಾರ್ಯಗಳನ್ನು ಮುಂದುವರಿಸದಂತೆ ಮೈಸೂರನ್ನುತಡೆಯಬೇಕೆಂಬ ತಮಿಳುನಾಡು ಹಾಗೂ ಕೇರಳ ಸರ್ಕಾರಗಳ ಪ್ರತ್ಯೇಕ ಮನವಿಗಳನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿತು.

ಆದರೆ, ಕಾವೇರಿ ಜಲವಿವಾದ ಸಂಬಂಧ ನ್ಯಾಯಮಂಡಲಿಯೊಂದನ್ನು ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂಬ ತಮಿಳುನಾಡಿನ ಮೂಲ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿತು.

‘ನಾಯಿಕೊಡೆ’ಗಳಂತಿರುವ ವ್ಯಾಪಾರಿಗಳನ್ನು ತಡೆಗಟ್ಟಲು ಅರಸು ಕರೆ

ಬೆಂಗಳೂರು, ಅ. 25– ‘ನಾಯಿಕೊಡೆಗಳಂತೆ’ ಅನೇಕರು ರೇಷ್ಮೆ ವ್ಯಾಪಾರದಲ್ಲಿ ತೊಡಗಿ ರುವುದು ರಫ್ತು ವ್ಯಾಪಾರದ ಮೇಲೆ ದುಷ್ಪರಿ
ಣಾಮವನ್ನುಂಟು ಮಾಡಿದೆ ಎಂದು ರೇಷ್ಮೆ ಮಂಡಳಿಯ ಅಧ್ಯಕ್ಷ ಶ್ರೀ ಡಿ.ದೇವರಾಜ ಅರಸು ಅವರು ಇಂದು ಇಲ್ಲಿ ತಿಳಿಸಿದರು.

ಇಂದು ಬಂದು ನಾಳೆ ರೇಷ್ಮೆ ರಫ್ತು ವ್ಯಾಪಾರದಿಂದ ನಿವೃತ್ತರಾಗುವ ಈ ಮಾರಕ ವ್ಯಾಪಾರಿಗಳನ್ನು ತಡೆಗಟ್ಟಲು ಪ್ರಯತ್ನಿಸ
ಬೇಕೆಂದು ರೇಷ್ಮೆ ರಫ್ತುದಾರರಿಗೆ ಅವರು ಸಲಹೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.