ಶುಕ್ರವಾರ, ಮೇ 27, 2022
29 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ 8–4–1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್ ವರ್ತನೆ ಹತೋಟಿ ಬಗ್ಗೆ ಸರ್ಕಾರದ ಭರವಸೆ

ಬೆಂಗಳೂರು, ಏ. 7– ಬೆಂಗಳೂರಿನ ಎಸ್‌.ಜಿ.ಇ.ಎಫ್ ನಲ್ಲಿ ನಿನ್ನೆ ಮತ್ತು ಮೊನ್ನೆ ನಡೆದ ಘಟನೆಗಳ ಸಂಬಂಧದಲ್ಲಿ ವಿಧಾನಸಭೆಯಲ್ಲಿ ಇಂದು ಬಿರುಸು ವಾತಾವರಣವನ್ನು ಎದುರಿಸಿದ ಸರ್ಕಾರ ಇನ್ನು ಮುಂದೆ ಪೊಲೀಸರ ವರ್ತೆನೆಯ ಮೇಲೆ ಸಂಯಮದ ಬಿಗಿಹಾಕುವ ಭರವಸೆಯನ್ನು ಶಾಸಕರಿಗೆ ನೀಡಿತು.

ಮುಂದೆ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆ ಬಲಪ್ರಯೋಗಿಸುವ ಪ್ರಸಂಗಗಳು ಬಂದಾಗ ದೀರ್ಘ ಆಲೋಚನೆ ಮಾಡದೇ ಈ ಕೆಲಸಕ್ಕೆ ಪೊಲೀಸರು ಕೈಹಾಕರು. ಇದು ಸರ್ಕಾರದ ನೀತಿಯಾಗಿದೆ‘ ಎಂದು ಘಟನೆಗಳ ಬಗ್ಗೆ ಸದನದ ಕಳವಳವನ್ನು ಪ್ರತಿಧ್ವನಿಸಿದ ಕೈಗಾರಿಕಾ ಮಂತ್ರಿ ಎಸ್‌.ಎಂ. ಕೃಷ್ಣ ಅವರು ಹೇಳಿದರು.

‘ತೀವ್ರ ಕ್ರಮ’: ಎಂ.ಎಸ್. ಕೃಷ್ಣನ್, ಎಸ್. ಬಂಗಾರಪ್ಪ ಮತ್ತು ಟಿ.ಆರ್. ಶಾಮಣ್ಣ ಅವರು ಕಳುಹಿಸಿದ ಮೂರು ಪ್ರತ್ಯೇಕ ನಿಲುವಳಿ ಸೂಚನೆಗಳ ಅಂಗೀಕಾರದ ಸಂಬಂಧದಲ್ಲಿ ನಡೆದ ಸುಮಾರು 2 ಗಂಟೆಗಳ ಕಾಲದ ಚರ್ಚೆಯಲ್ಲಿ ಉದ್ರಿಕ್ತ ಸದಸ್ಯರೊಬ್ಬರಿಂದ ಸಭಾ ತ್ಯಾಗವೂ ನಡೆಯಿತು.

ಪೊಲೀಸರ ವರ್ತನೆ ಬಗ್ಗೆ ರೋಷದಿಂದ ಮಾತನಾಡಿದ ಸದಸ್ಯರನ್ನು ಸಮಾಧನ ಮಾಡಿದ ಕೃಷ್ಣ ಅವರು ‘ಪೊಲೀಸರು ಎಲ್ಲೆಮೀರಿ ವರ್ತಿಸಿದ ಸಂಶಯ ಬಂದರೆ ಸರ್ಕಾ ಅವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದು‘ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು