ಗಾಂಧಿ ಸಮಾಧಿ ಬಳಿ ನೆಡಲು ಆಲಿವ್ ಸಸಿ

ನವದೆಹಲಿ, ಜ. 14– ಪ್ಲೇಟೊ ಮತ್ತು ಸಾಕ್ರಟೀಸರ ವಿದ್ಯಾಮಂದಿರದಲ್ಲಿದ್ದ ತೋಟದಿಂದ ಒಂದು ಆಲಿವ್ ಸಸಿಯನ್ನು ಮಹಾತ್ಮ ಗಾಂಧೀಜಿಯವರ ಜ್ಞಾಪಕಾರ್ಥ ಅವರ ಸಮಾಧಿಯ ಬಳಿ ನೆಡಲು ಗ್ರೀಸ್ ಸರಕಾರದವರು ತಮ್ಮ ಗೌರವ ಸಲ್ಲಿಕೆಯ ಸೂಚ್ಯರ್ಥವಾಗಿ ಕಳುಹಿಸಿದ್ದಾರೆ.

ಗೃಹ ಸಚಿವ ಸಿ. ರಾಜಗೋಪಾಲಾಚಾರಿಯವರು ಸೋಮವಾರ ಬೆಳಗ್ಗೆ ಈ ಸಸಿಯನ್ನು ಸಮಾಧಿ ಪಕ್ಕದಲ್ಲಿ ನೆಡುವರು.

ಶಾಂತಿ ಸೂಚಕವಾದ ಆಲಿವ್ ಸಸಿಯನ್ನು ಗ್ರೀಸ್ ಸರಕಾರ ಈಗ ನಡೆಯುತ್ತಿರುವ ಎಂಜಿನಿಯರಿಂಗ್ ಸಮ್ಮೇಳನಕ್ಕೆ ತಮ್ಮಲ್ಲಿಂದ ಪ್ರತಿನಿಧಿಯಾಗಿ ಬಂದಿರುವ ಎಂ. ಪೆಟ್ರೊ ಪಲಸ್ರ ಮೂಲಕ ಕಳಿಸಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.