ಮಹಾಜನ್ ಶಿಫಾರಸು: ರಾಜ್ಯದ ನಿಲುವು ಬದಲಾವಣೆ ಇಲ್ಲ

ಬೆಂಗಳೂರು, ಮೇ 25– ಮೈಸೂರು– ಮಹಾರಾಷ್ಟ್ರ ಮತ್ತು ಮೈಸೂರು–ಕೇರಳ ಗಡಿ ವಿವಾದ ಕುರಿತ ಮಹಾಜನ್ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಪೂರ್ಣವಾಗಿ ಅಂಗೀಕರಿಸಬೇಕೆಂಬ ಮೈಸೂರು ಸರ್ಕಾರದ ನಿಲುವು ಅಚಲ, ಅದರಲ್ಲಿ ಬದಲಾವಣೆ ಇಲ್ಲ.

ಕಾಂಗ್ರೆಸ್ ಶಾಸಕ ಪಕ್ಷದ ನೂತನ ನಾಯಕರಾಗಿ ಆಯ್ಕೆಗೊಂಡಿರುವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಸಂಜೆ ಪತ್ರಿಕಾ ಸಂದರ್ಶನದಲ್ಲಿ ಇದನ್ನು ಸ್ಪಷ್ಟಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆ 31 ಮಾರ್ಗಗಳ ರಾಷ್ಟ್ರೀಕರಣ

ಮಂಗಳೂರು, ಮೇ 25– ಜುಲೈ ಒಂದನೇ ತಾರೀಖಿನಿಂದ ದಕ್ಷಿಣ ಕನ್ನಡ ಜಿಲ್ಲೆಯ 31 ಮಾರ್ಗಗಳಲ್ಲಿ ಈಗ ಓಡುತ್ತಿರುವ 108 ಖಾಸಗಿ ಬಸ್ಸುಗಳ ಬದಲು ರಾಜ್ಯ ಸಾರಿಗೆ ಇಲಾಖೆಯ ಬಸ್ಸುಗಳ ಓಡಾಟ ಪ್ರಾರಂಭವಾಗಲಿದೆಯೆಂದು ಪ್ರಕಟಿಸಲಾಗಿದೆ.

ಅನಕ್ಷರತೆ ನಿವಾರಣೆಗೆ ಶ್ರೀಮತಿ ದುರ್ಗಾಬಾಯಿ ಕರೆ

ನಂಜನಗೂಡು, ಮೇ 25– ಸ್ವಯಂ ಪ್ರೇರಿತ ಸಂಸ್ಥೆಗಳು ಮುಂದೆ ಬರದಿದ್ದಲ್ಲಿ ಯಾವ ಸರ್ಕಾರವೇ ಆಗಲಿ ಸ್ವತಃ ಶಿಕ್ಷಣದಂತಹ ಅಗಾಧ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಲು ಸಾಧ್ಯವಿಲ್ಲವೆಂದು ಶ್ರೀಮತಿ ದುರ್ಗಾಬಾಯಿ ದೇಶಮುಖ್ ಅವರು ಇಂದು ಹೇಳಿದರು.

ಶ್ರೀಮತಿಯವರು, ನಂಜನಗೂಡು ವಿದ್ಯಾಪೀಠದಲ್ಲಿ ಲೇಖಕರ ಸಮಾವೇಶವನ್ನು ಉದ್ಘಾಟಿಸುತ್ತಾ, ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಅಮೆರಿಕದ ನೆರವಿನಿಂದ ಅನಕ್ಷರತೆಯನ್ನು ಹೋಗಲಾಡಿಸುವ ಬಗ್ಗೆ ಭಾರಿ ಕಾರ್ಯಕ್ರಮವಿದೆಯೆಂದು ಹೇಳಿದರು.

ಮೈಸೂರು ಸರ್ಕಾರವು ಸಹ ಈ ದಿಸೆಯಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ಈ ವಿದ್ಯಾಪೀಠವನ್ನು ಪ್ರಧಾನ ಕೇಂದ್ರವಾಗಿ ಉಪಯೋಗಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.

ದಿಲಾರಾಮ್ ಧೀಮಾನ್

ಬಿಲಾಸಪೂರ, ಮೇ 25– ಗ್ರಾಮಸೇವಕ ಕೆಲಸದಿಂದ ಕೇಂದ್ರ ಸರ್ಕಾರದ ಪ್ರಥಮ ದರ್ಜೆ ಆಧಿಕಾರಿ ಪದವಿಯನ್ನು ಪಡೆದಿರುವ ಪ್ರಥಮ ಹರಿಜನ್ ದಿಲಾ
ರಾಮ ಧೀಮಾನ್ ಹೆಸರಿಗೆ ತಕ್ಕಂತೆ ಧೀಮಂತ. ಗ್ರಾಮಸೇವಕ ಹುದ್ದೆಯಲ್ಲಿದ್ದ ಧೀಮಾನ್‌ಗೆ ಪ್ರಥಮ ದರ್ಜೆಯ ಅಧಿಕಾರಿಯಾಗಲು ಹತ್ತು ವರುಷಗಳು ಹಿಡಿದವು. ಇತ್ತೀಚೆಗೆ ಸ್ಥಾಪಿತವಾದ ಭಾರತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧೀಮಾನ್ ಯಶಸ್ವೀ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಹಿಮಾಚಲ ಪ್ರದೇಶದಲ್ಲಿನ ಬಿಲಾಸಪೂರದಿಂದ ನಾಲ್ವತ್ತು ಮೈಲಿ ದೂರದಲ್ಲಿರುವ ಮೈಹ್ರೀನ್ ಕಥ್ಲಾ ಎಂಬ ಗ್ರಾಮದಲ್ಲಿ ಬಡಿಗ–ಕಮ್ಮಾರ ಕೆಲಸದಲ್ಲಿ ತೊಡಗಿದ ಕುಟುಂಬವೊಂದರಲ್ಲಿ ದಿಲಾರಾಮ ಧೀಮಾನ್ ಜನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.