ಸೋಮವಾರ, ಆಗಸ್ಟ್ 10, 2020
20 °C

ರಾಸಾಯನಿಕಮುಕ್ತ ಕೃಷಿ ಎಂಬ ಅರಣ್ಯರೋದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೊಲ, ಗದ್ದೆಗಳಲ್ಲಿ ಒಳಸುರಿಗಳ ಸುರಿಮಳೆ’ ಎಂಬ ನಾಗೇಶ ಹೆಗಡೆ ಅವರ ಪತ್ರ (ವಾ.ವಾ., ಜುಲೈ 1) ಇಂದು ಅಭಿವೃದ್ಧಿ ಹೆಸರಿನಲ್ಲಿ ಭೂಮಿಯನ್ನು ಮನುಷ್ಯ ತೀವ್ರವಾಗಿ ಹಾಳುಗೆಡವುತ್ತಿರುವ ಚಿತ್ರಣವನ್ನು ನೀಡಿದೆ. ಎಷ್ಟೇ ಪ್ರಯತ್ನಿಸಿದರೂ ಬರಬರುತ್ತಾ ರಾಸಾಯನಿಕಮುಕ್ತ ಕೃಷಿಯ ಕೂಗು ಅರಣ್ಯರೋದನವಾಗುತ್ತಿದೆ. ಒಂದೆಡೆ, ರಾಸಾಯನಿಕ ಗೊಬ್ಬರ ಉತ್ಪಾದಕರ ಸಿರಿವಂತಿಕೆಯು ಸಮೃದ್ಧವಾಗುತ್ತಿದ್ದರೆ, ಮತ್ತೊಂದೆಡೆ, ಗೊಬ್ಬರ ಮಾರಾಟ ಗಾರರು ಗಲ್ಲಾಪೆಟ್ಟಿಗೆ ತುಂಬಿಕೊಂಡು, ಗೊಬ್ಬರ ತಯಾರಿಕಾ ಕಂಪನಿಯವರ ಖರ್ಚಿನಲ್ಲಿ ವಿದೇಶ ಸುತ್ತುತ್ತಿದ್ದಾರೆ. ಬಣ್ಣದ ಮಾತುಗಳನ್ನು ನಂಬಿದ ಬಡ ರೈತ ಭೂಮಿಗೆ ವಿಷವಿಕ್ಕಿ, ಕೊನೆಗೆ ತಾನೂ ವಿಷ ಉಣ್ಣುತ್ತಿದ್ದಾನೆ.

-ಭೀಮಣ್ಣ ಹುಣಸೀಕಟ್ಟಿ, ಲೋಕಾಪುರ, ಬಾಗಲಕೋಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು