ಸೋಮವಾರ, ಆಗಸ್ಟ್ 15, 2022
27 °C

ನಾಟಿ ಮದ್ದು: ನಿರ್ಲಕ್ಷ್ಯ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾದ ಈ ಕಾಲಘಟ್ಟದಲ್ಲಿ ವೈದ್ಯ ಪದ್ಧತಿಗಳಾದ ಆಯುರ್ವೇದ, ಅಲೋಪಥಿ, ಹೋಮಿಯೊಪಥಿ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪದವಿ ಪಡೆದವರು ಮಾತ್ರವೇ ಯೋಗ್ಯ ವೈದ್ಯರು ಎಂಬುದು ಕೆಲವರ ಭಾವನೆಯಾಗಿದೆ. ಆದರೆ ಅನೇಕ ಪರಂಪರಾಗತ ವೈದ್ಯರು, ನಾಟಿ ವೈದ್ಯರು, ಮನೆತನದ ಮೂಲಕ ತರಬೇತಿ ಪಡೆದ ವೈದ್ಯರು ಒಳ್ಳೆಯ ನಾಟಿ ಮದ್ದನ್ನು ಕೊಟ್ಟು ರೋಗವನ್ನು ಗುಣಪಡಿಸಿರುವುದನ್ನು ನೋಡಬಹುದು. ಬಹುತೇಕ ಇವರು ಪ್ರಸಿದ್ಧಿಗಾಗಲೀ, ಹಣಕ್ಕಾಗಲೀ ಈ ಕೆಲಸವನ್ನು ಮಾಡುತ್ತಿಲ್ಲ.

ಅಲೋಪಥಿ ವೈದ್ಯರಿಂದ ಗುಣಪಡಿಸಲು ಸಾಧ್ಯವಾಗದಿದ್ದ ಎರಡು ಕಾಯಿಲೆಗಳನ್ನು ಇಂತಹ ಪರಂಪರಾಗತ ವೈದ್ಯರಿಂದ ನಾನು ಗುಣಪಡಿಸಿಕೊಂಡಿದ್ದೇನೆ. ಇಂತಹ ಚಿಕಿತ್ಸಕರನ್ನು ಗುರುತಿಸಿ ಅವರ ವೃತ್ತಿಯನ್ನು ಗೌರವಿಸಿ, ಸಮಾಜದ ಒಳಿತಿಗೆ ಉಪಯೋಗಿಸಿಕೊಳ್ಳುವುದು ಉತ್ತಮ ಕಾರ್ಯವಾಗುತ್ತದೆ.

–ಮಲ್ಲಿಕಾರ್ಜುನ ಸ್ವಾಮಿ, ಮಧುಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು