ಮಂಗಳವಾರ, ಫೆಬ್ರವರಿ 25, 2020
19 °C

ಹೇಳೋರು ಕೇಳೋರು ಇಲ್ಲವೇ?

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು ನಗರದಲ್ಲಿ ಅಭಿವೃದ್ಧಿಯ ಸೋಗಿನಲ್ಲಿ ವ್ಯವಸ್ಥಿತ ಅಕ್ರಮ ನಡೆಯುತ್ತಿರುವುದನ್ನು ಸಾಮಾನ್ಯ ಜನರೂ ನೋಡಬಹುದಾಗಿದೆ. ಅಗೆದಲ್ಲೇ ಅಗೆಯುವುದು, ಮಾಡಿದ ಕೆಲಸವನ್ನೇ ಪುನಃ ಮಾಡುವುದು ಎಂಬಂತೆ ಜನರಿಗೆ ಬೇಡದಿರುವ ತೇಪೆ ಕೆಲಸಗಳ ಮೂಲಕ ಸಾರ್ವಜನಿಕರ ಹಣ ಲೂಟಿಯಾಗುತ್ತಿರುವುದು ಎಲ್ಲ ಕಡೆ ಕಂಡುಬಂದರೂ ಜನ ಯಾತಕ್ಕೆ ಸುಮ್ಮನಿದ್ದಾರೆ ಎಂಬುದೇ ಆಶ್ಚರ್ಯಕರ ವಿಷಯವಾಗಿದೆ.

ನಗರದ ಬಹುತೇಕ ವಾರ್ಡ್‌ಗಳಲ್ಲಿ ಟಾರು ಹಾಕಿದ ಮರುದಿನವೇ ಕಿತ್ತುಹೋಗುವ ರಸ್ತೆಗಳು, ಒಂದು ವರ್ಷವೂ ಬಾಳಿಕೆ ಬರದಂತೆ ನಿರ್ಮಾಣ ಮಾಡಿರುವ ಫುಟ್‍ಪಾತ್‍ಗಳು, ಹೂಳು ತುಂಬಿರುವ ಚರಂಡಿಗಳು, ಕಂಡ ಕಂಡಲ್ಲೆಲ್ಲ ಕೊಳೆ-ಕೊಚ್ಚೆ ಮತ್ತು ಎರ‍್ರಾಬಿರ‍್ರಿ ಮಾಡಿದ ಕಾಮಗಾರಿಗಳ ತ್ಯಾಜ್ಯಗಳು, ದೂಳುಮಯ ವಾತಾವರಣ ಮತ್ತು ನೋಡಿದಲ್ಲೆಲ್ಲ ಅವ್ಯವಸ್ಥೆ. ಜನರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಸರಿಪಡಿಸುವ ಇರಾದೆ ಮತ್ತು ಸಂಪನ್ಮೂಲವು ಮಹಾನಗರ ಪಾಲಿಕೆ ಬಳಿ ಇಲ್ಲದಿದ್ದರೂ ಪುತ್ಥಳಿಗಳ ಸ್ಥಾಪನೆಗೆ, ಉದ್ಯಾನಗಳ ನಿರ್ಮಾಣಕ್ಕೆ, ಕೃತಕ ಜಲಪಾತಗಳ ಸೃಷ್ಟಿಗೆ, ಗೋಪುರಗಳ ಸ್ಥಾಪನೆಗೆ ಮತ್ತು ರಸ್ತೆಗಳ ಪುನರ್‌ ನಾಮಕರಣಕ್ಕೆ ವಿಶೇಷ ಆಸಕ್ತಿ ಮತ್ತು ಹಣ ಇರುತ್ತದೆ! ಇದನ್ನು ನೋಡಿದರೆ ‘ಹೇಳುವವರು ಕೇಳುವವರು ಯಾರೂ ಇಲ್ಲವೇ?’ ಎಂಬ ಉಕ್ತಿಗೆ ಬೆಂಗಳೂರು ನಗರ ಪ್ರಶಸ್ತ ಸ್ಥಳ ಎಂಬಂತೆ ಕಂಡುಬರುತ್ತದೆ!

ದೀಪಕ್ ತಿಮ್ಮಯ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)