ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ಮಿತಿ ಮೀರಿದ ಅಸಮಾಧಾನ

ಅಕ್ಷರ ಗಾತ್ರ

ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರ್‌ರಚನೆ ಆದಾಗ ಸಚಿವಸ್ಥಾನ ವಂಚಿತರಿಂದ ಅಸಮಾಧಾನ ವ್ಯಕ್ತವಾಗುವುದು ಸಹಜ. ಆದರೆ ಈ ಬಾರಿಯ ಅಸಮಾಧಾನ ಮಿತಿಮೀರಿದಂತಿದೆ. ಸೂಕ್ಷ್ಮವಾಗಿ ಗಮನಿಸಿದಾಗ, ಸಂಪುಟದಲ್ಲಿ ಕೆಲವು ವ್ಯಕ್ತಿಗಳು ಮಂತ್ರಿಗಿರಿಯನ್ನು ಗುತ್ತಿಗೆ ಹಿಡಿದಿದ್ದಾರೇನೋ ಎನ್ನುವಂತೆ ಭಾಸವಾಗುತ್ತದೆ. ಈ ಮಾತು ಬರೀ ಯಡಿಯೂರಪ್ಪ ನೇತೃತ್ವದ ಸಂಪುಟಕ್ಕಷ್ಟೇ ಅನ್ವಯವಾಗುವುದಿಲ್ಲ. ಎಲ್ಲ ಪಕ್ಷಗಳಲ್ಲೂ ಹಿರಿತನಕ್ಕೆ ಮಣೆ ಎನ್ನುತ್ತಾ ಕೆಲವರನ್ನಷ್ಟೇ ಬೆಳೆಸುತ್ತಾ ಹೋದರೆ ಕಿರಿಯರು ಹಿರಿಯರ ಸಾಲಿಗೆ ಸೇರ್ಪಡೆಯಾಗುವುದು ಯಾವಾಗ?

ಈಗಿನ ಸಂಪುಟಕ್ಕೆ ಕೆಲವರ ಸೇರ್ಪಡೆಯನ್ನು ಗಮನಿಸಿದರೆ, ಉಳ್ಳವರ ಹುನ್ನಾರ ಸ್ಪಷ್ಟವಾಗುತ್ತದೆ. ಶಾಸಕರ ಕುರಿತು ಕಾಳಜಿ ಉಳ್ಳವರು, ಸಮಬಾಳು– ಸಮಪಾಲು ತತ್ವದಲ್ಲಿ ನಂಬಿಕೆಯುಳ್ಳವರು ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸಬೇಕು. ಅದಾಗಲೇ ಅಧಿಕಾರ ಅನುಭವಿಸಿದವರನ್ನು ಕೈಬಿಟ್ಟು, ನಿಷ್ಪಕ್ಷಪಾತವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಈ ಕುರಿತು ಚರ್ಚೆ ನಡೆಯಬೇಕಿದೆ.

– ಪ್ರಕಾಶ್ ಮಲ್ಕಿಒಡೆಯರ್,ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT