ಗುರುವಾರ , ಅಕ್ಟೋಬರ್ 1, 2020
27 °C

ವಾಚಕರ ವಾಣಿ | ಕಸಾಪಗೆ ಅಧ್ಯಕ್ಷೆಯ ಭಾಗ್ಯ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಶತಮಾನ ಪೂರೈಸಿದೆ. ಈ ವಿಷಯ ಹೆಗ್ಗಳಿಕೆಯದಾದರೂ ಇಲ್ಲಿಯವರೆಗೂ ಮಹಿಳೆಯೊಬ್ಬರು ಅದರ ಅಧ್ಯಕ್ಷರಾಗದೇ ಉಳಿದದ್ದು ಒಂದು ದೊಡ್ಡ ಕೊರತೆಯಾಗಿದೆ. ಪರೋಕ್ಷವಾಗಿ ಪುರುಷ ಪ್ರಾಬಲ್ಯ ಅಡಕವಾಗಿರುವ ಈ ಕ್ಷೇತ್ರದಲ್ಲೂ ಪ್ರಬಲ ಪಾರಮ್ಯವನ್ನು ದಾಟಿ ಮಹಿಳೆಯರೂ ಸ್ಪರ್ಧಿಸಲು ಹೆಚ್ಚು ಗಮನ ಹರಿಸಿದಂತೆ ಕಾಣುವುದಿಲ್ಲ.

ಎಂದಿನಂತೆ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯುವ ಸೂಚನೆಗಳು ಕಾಣತೊಡಗಿದ್ದು  ಚಟುವಟಿಕೆಗಳು ಗರಿಗೆದರಿವೆ. ಪ್ರಜ್ಞಾವಂತರು ಹಾಗೂ ವಿಚಾರಪರರು ಪರಿಷತ್ತಿಗೆ ಮಹಿಳೆಯನ್ನು ಆಯ್ಕೆ ಮಾಡುವ ಇಂಗಿತವನ್ನು ಪ್ರಬಲವಾಗಿ ವ್ಯಕ್ತಪಡಿಸಬೇಕು. ಇದೇನು ಬೇಡಿ ಪಡೆಯುವ ಸಂಗತಿಯಲ್ಲ. ಮಹಿಳೆಯರೂ ಈ ಬಗ್ಗೆ ಒಮ್ಮತದಿಂದ ನಿರ್ಧರಿಸಬೇಕು. ಅವಿರೋಧವಾಗಿ ಆಯ್ಕೆ ಮಾಡುವುದಾದರೆ ಅದಕ್ಕಿಂತ ಸೂಕ್ತ ಮಾರ್ಗ ಇನ್ನೊಂದಿಲ್ಲ. ಆದರೆ ಚುನಾವಣೆ ನಡೆಯುವುದೇ ಆದಲ್ಲಿ, ಸೂಕ್ತ ಮಹಿಳಾ ಅಭ್ಯರ್ಥಿಯನ್ನು ಸೂಚಿಸಿ, ನಾಡಿನ ಎಲ್ಲಾ ಹಿರಿಯ, ಕಿರಿಯ ಸಾಹಿತಿಗಳು, ಲೇಖಕರು, ಪರಿಷತ್ತಿನ ಸದಸ್ಯರು ಅವಿರೋಧವಾಗಿ ಅವರನ್ನು ಬೆಂಬಲಿಸಬೇಕು.

-ಮಮತಾ ಅರಸೀಕೆರೆ, ಅರಸೀಕೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು