ಶನಿವಾರ, ಜನವರಿ 18, 2020
20 °C

ಕೆಲಸ ಇಲ್ಲದವರು ಇನ್ನೇನೋ ಮಾಡಿದರಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

'ಇಂದಿರಾ ಕ್ಯಾಂಟೀನ್’ ಹೆಸರನ್ನು ಬಿಜೆಪಿ ನೇತೃತ್ವದ ಸರ್ಕಾರ ಬದಲಿಸಲು ಮುಂದಾಗಿರುವುದು ವರದಿಯಾಗಿದೆ. ಮಾಡಲು ಬೇರೆ ಏನೂ ಕೆಲಸ ಇಲ್ಲದವರು ಇನ್ನೇನೋ ಮಾಡಿದರಂತೆ ಎಂಬ ಗಾದೆ ಮಾತಿನಂತಿದೆ ಸರ್ಕಾರದ ಈ ನಡೆ. ಯಾರು ಒಪ್ಪಲಿ, ಬಿಡಲಿ. ಇಂದಿರಾ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದವರು. ಅವರ ಹೆಸರನ್ನು ಆ ಕ್ಯಾಂಟೀನ್‌ಗೆ ಇಟ್ಟಿದ್ದಾರೆ. ಅದರಿಂದ ಯಾರಿಗೂ ನಷ್ಟ ಇಲ್ಲ.

ಈಗ ಚರ್ಚೆ ಆಗಬೇಕಾಗಿರುವುದು ಹೆಸರಿನ ಬಗ್ಗೆ ಅಲ್ಲ. ಬದಲಿಗೆ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಮತ್ತು ಆಹಾರದ ಪ್ರಮಾಣದ ಬಗ್ಗೆ. ಈ ಸರ್ಕಾರಕ್ಕೆ ಜನಪರ ಕಾಳಜಿ ಇದ್ದರೆ ಅದೇ ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಹಾಗೂ ಇನ್ನೂ ಹೆಚ್ಚು ಪ್ರಮಾಣದ ಆಹಾರವನ್ನು ನೀಡುವ ಬಗ್ಗೆ ಚಿಂತಿಸಲಿ. ಅದನ್ನು ಬಿಟ್ಟು, ಹೆಸರನ್ನು ಬದಲಿಸುವ ಕ್ಷುಲ್ಲಕ ರಾಜಕೀಯ ಬೇಡ.

ಅತಿವೃಷ್ಟಿಯಿಂದ ರಾಜ್ಯದ ಜನರು ತೊಂದರೆ ಅನುಭವಿಸಿದ್ದಾರೆ. ಈರುಳ್ಳಿ ಬೆಲೆ ಗಗನಕ್ಕೆ ಮುಟ್ಟಿದೆ. ಯುವಪೀಳಿಗೆಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿಲ್ಲ ಎಂಬ ಮಾತಿದೆ. ಇವನ್ನೆಲ್ಲ ನಿಭಾಯಿಸುವ ಕಡೆ ಗಮನ ಕೊಡುವುದು ಬಿಟ್ಟು, ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನಗಳು ಬೇಡ.

ಆರ್.ಎಸ್. ಅಯ್ಯರ್, ತುಮಕೂರು

 

ಪ್ರತಿಕ್ರಿಯಿಸಿ (+)