ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಸುರಕ್ಷತೆ: ಇರಲಿ ತರಬೇತಿ

Last Updated 21 ನವೆಂಬರ್ 2022, 16:10 IST
ಅಕ್ಷರ ಗಾತ್ರ

ಕಾರ್ಖಾನೆಗಳಲ್ಲಿ ರಾಸಾಯನಿಕಗಳ ಅಸಮರ್ಪಕ ಸಂಗ್ರಹ ಹಾಗೂ ಬಳಕೆಯ ವಿಧಾನಗಳಿಂದ ಅಪಘಾತಗಳು ಸಂಭವಿಸುತ್ತವೆ. ಆದರೆ ಅಪರೂಪದ ಪ್ರಕರಣವೆಂಬಂತೆ, ಹೈದಾರಾಬಾದ್‌ನಲ್ಲಿರುವ ಸರ್ಕಾರಿ ಕಾಲೇಜೊಂದರ ಪ್ರಯೋಗಾಲಯದಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದು (ಪ್ರ.ವಾ.,ನ. 18) ದುರದೃಷ್ಟಕರ.

ಸುರಕ್ಷತೆ ದೃಷ್ಟಿಯಿಂದ ರಸಾಯನ ವಿಜ್ಞಾನವು ಉಳಿದ ವಿಷಯಗಳಿಗಿಂತ ಭಿನ್ನವಾಗಿದ್ದು, ರಾಸಾಯನಿಕಗಳ ಸ್ವಭಾವ, ಅವುಗಳ ಸಂಗ್ರಹ, ಬಳಸುವ ವಿಧಾನ, ವಿಲೇವಾರಿ ವಿಧಾನದಂತಹ ವಿಚಾರಗಳ ಬಗ್ಗೆ ಅರಿವು ಹಾಗೂ ತರಬೇತಿ ನೀಡುವುದು ಆದ್ಯತೆಯ ಅಂಶವಾಗಬೇಕು. ಆದರೆ, ಪಠ್ಯಗಳಲ್ಲಿ ಇಂತಹವನ್ನು ಕಲಿಸುವುದಿಲ್ಲ. ಆದ್ದರಿಂದ, ಪದವಿ ಪೂರ್ವ ಪಠ್ಯದಿಂದ ಆರಂಭಿಸಿ ಸ್ನಾತಕೋತ್ತರ ಶೈಕ್ಷಣಿಕ ಪಠ್ಯಕ್ರಮದವರೆಗೂ ರಾಸಾಯನಿಕ ಸುರಕ್ಷತೆಯ ವಿಷಯವನ್ನು ಸೇರಿಸಿದರೆ, ಅಪಾಯಕಾರಿ ರಾಸಾಯನಿಕಗಳಿಂದ ಸಂಭವಿಸಬಹುದಾದ ಅಪಘಾತಗಳು ಹಾಗೂ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು.

ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT