ವಿವಿಧ ಹಂತದ ಚುನಾವಣೆಗಳು ನಡೆಯುವಾಗ, ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಇದಕ್ಕಾಗಿ ಶಾಲಾ ಕಾಲೇಜುಗಳ ಕೊಠಡಿಗಳನ್ನು ಬಳಸಿಕೊಳ್ಳುವ ಆಡಳಿತ ವ್ಯವಸ್ಥೆಯು ಅದನ್ನು ಸರಿಯಾಗಿ ನಿರ್ವಹಿಸಬೇಕಾದ ಅಗತ್ಯ ಇರುತ್ತದೆ. ಆದರೆ ಹಲವೆಡೆ ತರಗತಿಯ ಕೊಠಡಿಗಳಿಗೆ ಬಣ್ಣದ ಗಮ್‍ಟೇಪು ಅಂಟಿಸುವುದು, ಪೆಯಿಂಟ್ ಅಥವಾ ಬಣ್ಣದಿಂದ ಬೇಕಾಬಿಟ್ಟಿ ಗೆರೆಗಳನ್ನು ಎಳೆಯುವುದು, ಕಪ್ಪುಹಲಗೆ, ಗ್ರೀನ್‍ಬೋರ್ಡ್‍ಗಳಿಗೆ ಅಂಟುಹಾಕಿದ ಹಾಳೆಗಳನ್ನು ತೇಪೆ ಹಾಕುವುದು ಕಂಡುಬರುತ್ತದೆ.

ಇಷ್ಟುಮಾತ್ರವಲ್ಲ, ತರಬೇತಿಗೆ ಬರುವ ಕೆಲವು ಸಿಬ್ಬಂದಿ ತಮ್ಮ ಪಾದರಕ್ಷೆಗಳ ಸಮೇತ ಬಿಳಿಗೋಡೆಗೆ ಕಾಲುಕೊಟ್ಟು ವಾಲಿಕೊಂಡು ನಿಂತುಕೊಳ್ಳುವುದೂ ಇರುತ್ತದೆ. ಇದರಿಂದ ಗೋಡೆ ಮೇಲೆಲ್ಲ ಕೊಳಕು ಚಿತ್ರಗಳು ಮೂಡುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳ ಪಾವಿತ್ರ್ಯ ಕಾಯ್ದುಕೊಳ್ಳುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.