ಮಂಗಳವಾರ, ಮೇ 11, 2021
27 °C

ಕಕ್ಷಿದಾರಸ್ನೇಹಿ ‘ಲೋಕ ಅದಾಲತ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಜಿಲ್ಲೆಗೆ ಒಳಪಡುವ 52 ನ್ಯಾಯಾಲಯಗಳಲ್ಲಿ ಇತ್ತೀಚೆಗೆ ಲೋಕ ಅದಾಲತ್ ಮೂಲಕ ಜಾಮೀನುರಹಿತ ಕ್ರಿಮಿನಲ್ ಕೇಸುಗಳನ್ನು ಹೊರತುಪಡಿಸಿ, ಒಟ್ಟಾರೆ ದಾಖಲಾದ 24,951 ಪ್ರಕರಣಗಳ ಪೈಕಿ, 14,237 ಪ್ರಕರಣಗಳನ್ನು ಒಂದೇ ದಿನ ಇತ್ಯರ್ಥಪಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 29 ಜೋಡಿಗಳು ತಮ್ಮ ಸಮಸ್ಯೆಗಳನ್ನು ಸೌಹಾರ್ದದಿಂದ ಬಗೆಹರಿಸಿಕೊಂಡು ಮತ್ತೆ ಒಂದಾಗಿರುವುದು ಮೆಚ್ಚತಕ್ಕ ಸಂಗತಿ. ವರ್ಷಾನುಗಟ್ಟಲೆ ಇತ್ಯರ್ಥಗೊಳ್ಳದ ಪ್ರಕರಣಗಳಿಗೆ ಲೋಕ ಅದಾಲತ್ ಸಂಜೀವಿನಿ ಸ್ವರೂಪದ್ದಾಗಿದೆ. ಮುಖ್ಯವಾಗಿ ಇದು ಕಕ್ಷಿದಾರಸ್ನೇಹಿಯಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನಡೆಯುವ ಲೋಕ ಅದಾಲತ್‌ಗಳು ಹೆಚ್ಚು ಹೆಚ್ಚು ಜನಪ್ರಿಯವಾಗಲು ನಾನಾ ಕಾರಣಗಳಿವೆ. ಮುಖ್ಯವಾಗಿ ಅಮೂಲ್ಯವಾದ ಸಮಯದ ಉಳಿತಾಯ, ಅತ್ಯಂತ ಕಡಿಮೆ ಖರ್ಚಿನಲ್ಲಿ ವ್ಯಾಜ್ಯಗಳ ಬಗೆಹರಿಸುವಿಕೆ, ಕೋರ್ಟ್ ಫೀ ಪಾವತಿಯಲ್ಲಿ ವಿನಾಯಿತಿ ಮುಂತಾದ ಆಕರ್ಷಕ ಉಪಕ್ರಮಗಳಿಂದಾಗಿ ನ್ಯಾಯ ವಿತರಣೆಯಲ್ಲಿ ಲೋಕ ಅದಾಲತ್ ದಾಪುಗಾಲು ಹಾಕುತ್ತಿದೆ. ವರ್ಷಾನುಗಟ್ಟಲೆ ಕೋರ್ಟು– ಕಚೇರಿಗಳಿಗೆ ಅಲೆದಲೆದು ಬಸವಳಿದಿರುವ ಕಕ್ಷಿದಾರರು ಇದರ ಪ್ರಯೋಜನ ಪಡೆದು
ಕೊಳ್ಳಬೇಕಾಗಿದೆ.

ಕೆ.ವಿ.ವಾಸು, ಮೈಸೂರು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು