ಶುಕ್ರವಾರ, ಸೆಪ್ಟೆಂಬರ್ 25, 2020
21 °C

ವಾಚಕರ ವಾಣಿ | ಸದವಕಾಶ ಕಳೆದುಕೊಂಡ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಕೊರೊನಾ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡೆ ಮೂಲಕ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಮೂಡಿಸುವಂತಹ ಸುವರ್ಣ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ. ಸ್ವತಃ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಸರ್ಕಾರಿ ಸೇವೆಗಳ ಬಗ್ಗೆ ಜನರ ನಂಬಿಕೆಯನ್ನು ಅವರು ಇಮ್ಮಡಿಗೊಳಿಸಬಹುದಿತ್ತು.

ಒಬ್ಬ ಮುಖ್ಯಮಂತ್ರಿಗೆ ತನ್ನ ನೇತೃತ್ವದಲ್ಲಿ ನಡೆಯುವ ಸಂಸ್ಥೆಗಳ ಬಗ್ಗೆಯೇ ನಂಬಿಕೆ ಇಲ್ಲದೇ ಹೋದರೆ ಇನ್ನು ಪ್ರಜೆಗಳು ಅವುಗಳನ್ನು ಹೇಗೆ ನಂಬುತ್ತಾರೆ? ಸರ್ಕಾರಿ ಆಸ್ಪತ್ರೆಗಳು ನಂಬಲು ಅರ್ಹವಲ್ಲ ಎನ್ನುವುದಾದರೆ, ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲಿ. ಬಡ ಬೋರೇಗೌಡನ ಸುಂಕದ ಹಣದಲ್ಲಿ ರಾಜಕಾರಣಿಗಳಿಗೆ ವಿಶೇಷ ಸೌಲಭ್ಯ ಸಲ್ಲದು.

-ಶಿವಕುಮಾರ್ ಎಚ್‌.ಎನ್‌., ನಂಜನಗೂಡು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು