ಸೋಮವಾರ, ಫೆಬ್ರವರಿ 24, 2020
19 °C
ವೃತ್ತಿ ಭದ್ರತೆ ಸಿಗಲಿ

ನಾಲ್ಕೂವರೆ ಗಂಟೆಗಳಲ್ಲಿ 350 ಕಿ.ಮೀ. ಕ್ರಮಿಸಿದ ‘ಜೀವರಕ್ಷಕ’ ಅಭಿನಂದನಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೃದಯಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 40 ದಿನದ ಮಗುವನ್ನು ಇತ್ತೀಚೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಿಂದ ಝೀರೊ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆದೊಯ್ದ ಹನೀಫ್ ಎಂಬ ಚಾಲಕರ ಕರ್ತವ್ಯಪ್ರಜ್ಞೆ ಒಂದೆಡೆಯಾದರೆ, ದೂರದ ಬೆಂಗಳೂರಿನವರೆಗೂ ಆಂಬುಲೆನ್ಸ್‌ನ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಪೊಲೀಸರ ವೃತ್ತಿಪರತೆ ಮತ್ತೊಂದೆಡೆ. ಇವರೆಲ್ಲರೂ ಅಭಿನಂದನಾರ್ಹರು.

ಇದನ್ನೂ ಓದಿ: ನಾಲ್ಕೂವರೆ ಗಂಟೇಲಿ ಮಂಗಳೂರಿಂದ ಬೆಂಗಳೂರಿಗೆ ಬಂತು ಆಂಬುಲೆನ್ಸ್‌

ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಪರರ ಜೀವವನ್ನು ಉಳಿಸುವ ಹನೀಫ್‌ ಅವರಂತಹ ಆಂಬುಲೆನ್ಸ್ ಚಾಲಕರು ಮತ್ತು ಈಜುಗಾರರು ಇದ್ದಾರಾದರೂ ಅವರು ಬಹುತೇಕ ತೆರೆಮರೆಯಲ್ಲಿಯೇ ಇರುತ್ತಾರೆ. ಅಂತಹವರ ಕಾರ್ಯವನ್ನು ಗುರುತಿಸಿ ಗೌರವಿಸಬೇಕಾಗಿದೆ. ಇಂತಹ ಜೀವರಕ್ಷಕರಿಗೆ ಸರ್ಕಾರವು ಸೇವಾ ಭದ್ರತೆಯನ್ನು ಒದಗಿಸಬೇಕಾಗಿದೆ.

ಆದರ್ಶ್ ಶೆಟ್ಟಿ ಕಜೆಕ್ಕಾರ್, ಉಪ್ಪಿನಂಗಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)