ಕೊರೊನಾ– 2 ಸೋಂಕಿನ ಮುನ್ನೆಚ್ಚರಿಕೆಯಾಗಿ ರಾಜ್ಯ ಸರ್ಕಾರ ವಿಧಿಸಿರುವ ಹಲವು ನಿರ್ಬಂಧಗಳನ್ನು ಸ್ವತಃ ಮುಖ್ಯಮಂತ್ರಿ ರಾಜಾರೋಷವಾಗಿ ಉಲ್ಲಂಘಿಸಿದ್ದನ್ನು ಪತ್ರಿಕೆಯಲ್ಲಿ ಓದಿ ಬೇಜಾರಾಯಿತು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿನ ತಪಾಸಣೆಗೂ ಅವರು ಕ್ಯಾರೇ ಎನ್ನಲಿಲ್ಲ. ಹಿರಿಯೂರಿನಲ್ಲಿ ಜರುಗಿದ ರಾಜಕಾರಣಿಯೊಬ್ಬರ ಕುಟುಂಬದ ವಿವಾಹ ಸಮಾರಂಭದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರಾದಿಯಾಗಿ ಅಧಿಕಾರಿಗಳು ಮತ್ತು ಸಾವಿರಾರು ಜನ ಭಾಗವಹಿಸಿದ್ದರು. ಆದರೆ ಅವರ‍್ಯಾರೂ ಮಾಸ್ಕ್ ಧರಿಸದೆ ಕೊರೊನಾದಂಥ ಹೆಮ್ಮಾರಿಯನ್ನು ಲಘುವಾಗಿ ಪರಿಗಣಿಸಿದ್ದು ಸರಿಯಲ್ಲ. ಅಕಟಕಟಾ, ದೊರೆಯೇ ದಾರಿತಪ್ಪಿದರೆ ಸಾಮಾನ್ಯನ ಗೋಳು ಕೇಳುವವರಾರು?

ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ

ಪ್ರತಿಷ್ಠೆ ಬೇಡ; ಅರಿವು ಮೂಡಬೇಕಿದೆ

ಕೊರೊನಾ ವೈರಸ್ ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದೆ. ಇಂತಹ ಸಂದರ್ಭದಲ್ಲಿ, ‘ಅನ್ಯ ದೇಶಗಳು ನಮ್ಮ ಸಂಸ್ಕೃತಿಯನ್ನು ಪಾಲಿಸುತ್ತಿವೆ’, ‘ಭಾರತದಲ್ಲಿ ಈ ವೈರಸ್ ಬೇಗ ಹರಡುವುದಿಲ್ಲ’ ಎಂಬಂತಹ ಪ್ರತಿಷ್ಠೆಯ ಮಾತುಗಳು ನಮ್ಮಲ್ಲಿ ಕೇಳಿಬರುತ್ತಿವೆ. ಈಗ ನಾವು ಇಂತಹ ಪ್ರತಿಷ್ಠೆಗಿಂತ, ಜನರಲ್ಲಿ ವೈರಸ್ ಬಗ್ಗೆ ಸೂಕ್ತ ಅರಿವು ಮೂಡಿಸಬೇಕಾಗಿದೆ. ಸರ್ಕಾರದ ಜೊತೆ ಜನರೂ ಕೈಜೋಡಿಸಬೇಕಾಗಿದೆ.

ಸಣ್ಣಮಾರಪ್ಪ,ಚಂಗಾವರ, ಶಿರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.