ಬುಧವಾರ, ಜೂನ್ 16, 2021
22 °C

ಕ್ಯೂ ಎನ್ನುವ ಸಂಸ್ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಸಿಕೆಗಾಗಿ ಜನರು ಗುಂಪಾಗಿ ನಿಂತ ಚಿತ್ರ (ಪ್ರ.ವಾ., ಮೇ 8) ಪ್ರಕಟವಾಗಿದೆ. ನಮಗೆ ನಾಲ್ಕನೇ ತರಗತಿಯಲ್ಲಿ ‘ಸರತಿಯ ಸಾಲು’ ಎನ್ನುವ ಒಂದು ಪಾಠ ಇತ್ತು. ನಮ್ಮ ದೇಶದಲ್ಲಿ ಕ್ಯೂ ಅಂದರೆ ಒಬ್ಬರ ಹಿಂದೆ ಒಬ್ಬರು ನಿಲ್ಲದೆ ಒಂದು ಗುಂಪಾಗಿ ನಿಂತಿರುತ್ತಾರೆ. ಬ್ಯಾಂಕುಗಳಲ್ಲಿ ಟೋಕನ್ ವ್ಯವಸ್ಥೆ ಇತ್ತು. ಆನಂತರ ಕೆಲವು ಬ್ಯಾಂಕುಗಳಲ್ಲಿ ಅದು ಏಕೋ ಮಾಯವಾಯಿತು.

ನಾನು ಕೆಲವು ತಿಂಗಳ ಹಿಂದೆ ಕೋವಿಡ್ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದೆ. ಮುಂದಿನವರಿಂದ ಅಂತರ ಕಾಯ್ದುಕೊಂಡು ದೂರ ನಿಂತೆ. ನಡುವೆ ಇದ್ದ ಜಾಗದಲ್ಲಿ ಬೇರೆಯವರು ಬಂದು ತೂರಿಕೊಳ್ಳುತ್ತಿದ್ದರು. ಹಿಂದೆ ಇದ್ದವರು ಕೆಲವರು ನಿಮ್ಮನ್ನು ಮುಂದಕ್ಕೆ ತಳ್ಳುತ್ತಾರೆ ಇಲ್ಲವೇ ಪಕ್ಕಕ್ಕೆ ಬಂದು ನಿಲ್ಲುತ್ತಾರೆ. ಕೆಲವು ಸಂಸ್ಕೃತಿಗಳನ್ನು ನಮ್ಮ ಜನ ಕಲಿಯಲೇ ಇಲ್ಲ.

-ಪ್ರೊ. ಶಶಿಧರ್‌ ಪಾಟೀಲ್‌, ಬಾಗಲಕೋಟೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು