‘ಅನುಮತಿ’ ಎಂಬ ಅಡ್ಡಗೋಡೆ!
ಕೆಲವು ವಂಚನೆ ಪ್ರಕರಣಗಳ ಬಗ್ಗೆ ಪತ್ರಿಕೆಯಲ್ಲಿ (ಪ್ರ.ವಾ., ಜುಲೈ 9) ವರದಿಯಾಗಿದೆ. ‘ಚಲನ್ ತಿದ್ದಿ ವಂಚನೆ: ಸಬ್ ರಿಜಿಸ್ಟ್ರಾರ್ ಸೇರಿ ನಾಲ್ವರ ವಜಾ’, ‘ಕೆಪಿಎಸ್‌ಸಿ ಸದಸ್ಯನ ಸೋಗಿನಲ್ಲಿ ವಂಚನೆ: ಒಬ್ಬನ ಬಂಧನ’, ‘ಪವರ್ ಬ್ಯಾಂಕ್ ವಂಚಕನ ಬಂಧನ’ ಎಂಬ ಸುದ್ದಿಗಳ ಜೊತೆಗೆ ಮತ್ತೊಂದು ಪ್ರಮುಖ ಸುದ್ದಿ ಎಂದರೆ, ಭ್ರಷ್ಟಾಚಾರ ಆರೋಪದಲ್ಲಿ ಮುಖ್ಯಮಂತ್ರಿ ಸೇರಿ ಒಂಬತ್ತು ಮಂದಿ ಮೇಲಿನ ದೂರು ವಜಾ ಆಗಿರುವುದು. ಈ ಪ್ರಕರಣದಲ್ಲಿ, ರಾಜ್ಯಪಾಲರಿಂದ ಪೂರ್ವಾನುಮತಿ ಪಡೆಯದೇ ಇದ್ದ ಕಾರಣಕ್ಕೆ ದೂರನ್ನು ವಜಾ ಮಾಡಲಾಗಿದೆ. ಕ್ರಿಮಿನಲ್ ಆರೋಪಗಳ ವಿಷಯದಲ್ಲಿ ಆಡಳಿತಾರೂಢರಿಗೆ ಮತ್ತು ಸಾಮಾನ್ಯರಿಗೆ ಭಿನ್ನ ಭಿನ್ನ ನ್ಯಾಯ ಸರಿಯೇ? ‘ಅನುಮತಿ’ ಎಂಬ ಅಡ್ಡಗೋಡೆ ಏಕೆ? ಈ ಒಂದು ಅಡ್ಡಗೋಡೆಯಿಂದ ದೊಡ್ಡಕುಳಗಳು ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಸಿಗಬಹುದು.
–ಸಿ.ಕೃಷ್ಣ, ಲಕ್ಕವನಹಳ್ಳಿ, ಶಿರಾ
ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.