ಶನಿವಾರ, ಅಕ್ಟೋಬರ್ 31, 2020
20 °C

ಸಾಸಿವೆ ಕಾಳಿನಷ್ಟು ಸುಖಕ್ಕೆ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕೋವಿಡ್‌ ಕಾಲದಲ್ಲಿ ನಡೆಯುತ್ತಿರುವ ಸರಳ ಮದುವೆಗಳ ಕುರಿತು ಸಿಬಂತಿ ಪದ್ಮನಾಭ ಅವರು ಬರೆದಿರುವ ಲೇಖನ (ಸಂಗತ, ಅ. 7) ಸಮಯೋಚಿತವಾಗಿದೆ ಮತ್ತು ಸರ್ವರೂ ಅನುಸರಿಸಬೇಕಾದ ಸಂಗತಿಗಳಿಂದ ಕೂಡಿದೆ. ಕೊರೊನಾ ಸೋಂಕಿನ ಕಾರಣದಿಂದಾದರೂ ಆಡಂಬರದ ಮದುವೆಗಳು ನಿಯಂತ್ರಣಕ್ಕೆ ಬಂದಿರುವುದು ಸಮಾಧಾನದ ಸಂಗತಿ. ಅದ್ಧೂರಿ ಮದುವೆಗಳು ಅನಗತ್ಯ ಖರ್ಚಿಗೆ ಕಾರಣವಾಗುತ್ತವೆ. ಹೀಗಾಗಿ, ಹೆಣ್ಣುಮಕ್ಕಳಾದರೆ ಖರ್ಚು, ಜವಾಬ್ದಾರಿ ಹೆಚ್ಚು ಎಂದು ತಿಳಿದು ಹೆಣ್ಣು ಭ್ರೂಣವನ್ನು ಹೊಸಕಿಹಾಕುವ ದುಷ್ಕೃತ್ಯ ಸಮಾಜದಲ್ಲಿ ನಡೆಯುತ್ತಿದೆ. ಅದರ ಬದಲು, ಸರಳ ಮದುವೆಗಳಾದರೆ ‘ಹೆಣ್ಣು ಹೆತ್ತರೆ ಹೊರೆ’ ಎನ್ನುವ ಭಾವನೆ ಹೋಗಬಹುದು.

ಆಡಂಬರದ ಮದುವೆಗಳಿಗೆ ಅನವಶ್ಯಕವಾಗಿ ವೆಚ್ಚ ಮಾಡುವ ಹಣವನ್ನು ತಮ್ಮ ಊರಿನ ಶಾಲೆಗೋ ಆಸ್ಪತ್ರೆಯ ಅಭಿವೃದ್ಧಿಗೋ ಕೊಡುವ ಉದಾರ ಮನಸ್ಸನ್ನು ಜನ ಹೊಂದಬೇಕು. ‘ಸಾಸಿವೆ ಕಾಳಿನಷ್ಟು ಸುಖಕ್ಕೆ ಸಾಗರದಷ್ಟು ದುಃಖ’ ಎಂಬಂತೆ, ಒಂದು ದಿನದ ಆಡಂಬರದ ಮದುವೆಗಾಗಿ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುವವರೇ ಹೆಚ್ಚು. ನಂತರ ಆ ಸಾಲ ಹಾಗೂ ಬಡ್ಡಿಯನ್ನು ತೀರಿಸಲಾಗದೆ ಒದ್ದಾಡುವಂತಹ ಪರಿಸ್ಥಿತಿ ತಂದುಕೊಳ್ಳದೆ, ಸರಳವಾಗಿ ಮದುವೆ ಮಾಡಿಕೊಂಡು ಸಂತೋಷವಾಗಿ ಜೀವನ ಸಾಗಿಸುವುದು ಒಳ್ಳೆಯದು.

– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.