ಮಂಗಳವಾರ, ಡಿಸೆಂಬರ್ 1, 2020
18 °C

ವಾಚಕರ ವಾಣಿ: ಬಗೆ ಬಗೆ ಪಾಠ, ಬದಲಾದ ಮನೋಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದುಡ್ಡಿನ ಉಳಿತಾಯದ ಪಾಠ’ ಕುರಿತ ವಿಶೇಷ ವರದಿ (ಪ್ರ.ವಾ., ನ. 2) ಉತ್ತಮವಾಗಿದೆ. ಜೀವನದ ಪ್ರತಿಯೊಂದು ಸೋಲು, ಕಷ್ಟ, ನಿರಾಸೆ ಸಹ ನಮಗೆ ಒಳ್ಳೆಯ ಪಾಠವನ್ನು ಕಲಿಸುತ್ತವೆ ಎಂಬುದಕ್ಕೆ ಕೊರೊನಾ ಉತ್ತಮ ಉದಾಹರಣೆ. ಹೆಚ್ಚಿನವರು ತಮ್ಮನ್ನು ಯಾವುದೂ ನಿಯಂತ್ರಿಸುವುದಿಲ್ಲ ಹಾಗೂ ತಮ್ಮ ಬಳಿ ಬೇಕಾದುದೆಲ್ಲ ಇದೆ ಎಂದು ಹಮ್ಮಿನಿಂದ ಇರುತ್ತಿದ್ದರು. ಅಂಥವರಿಗೆ ಕೊರೊನಾ ಸರಿಯಾದ ಪಾಠವನ್ನೇ ಕಲಿಸಿದೆ. ಕೆಲಸ ಮಾಡುವಲ್ಲಿ ಕೆಲವರಿಗೆ ಇದ್ದ ಅಸಡ್ಡೆ ಮನೋಭಾವ ಬದಲಾಗಿದೆ ಹಾಗೂ ಕೆಲಸಕ್ಕೆ ಗೌರವ ಕೊಡುವ ಮನೋಭಾವ ಬಂದಿದೆ. ಅನವಶ್ಯಕವಾಗಿ ದುಡ್ಡನ್ನು ಖರ್ಚು ಮಾಡುತ್ತಿದ್ದವರು ಸಹ ಈಗ ಬದಲಾಗಿದ್ದಾರೆ. ಹೇಗೆ ಬೇಕಾದರೂ ಬದುಕಬಹುದೆಂಬ ಮನಃಸ್ಥಿತಿ ಬದಲಾಗಿ ಹೀಗೂ ಬದುಕಬಹುದೆಂಬ ಹೊಸ ಮನೋಭಾವವನ್ನು ಕೊರೊನಾ ಹುಟ್ಟುಹಾಕಿರುವುದಂತೂ ನಿಜ. ವಿಜ್ಞಾನದ ಆವಿಷ್ಕಾರಗಳಿಂದ ಏನಾದೀತು ಎಂದು ಮೂಗು ಮುರಿಯುತ್ತಿದ್ದವರಿಗೆ ವರ್ಕ್‌ ಫ್ರಂ ಹೋಮ್, ಆನ್‌ಲೈನ್ ಕ್ಲಾಸ್ ಬದುಕನ್ನು ತಂದುಕೊಟ್ಟಿವೆ. ಅತಿ ಮುಖ್ಯವಾಗಿ ಸ್ವಚ್ಛತೆಯ ಪಾಠವನ್ನು ಕೊರೊನಾ ಕಲಿಸಿದೆ.

–ಕಡೂರು ಫಣಿಶಂಕರ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು