ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಜಾತ್ರೆ, ಮೆರವಣಿಗೆ... ಮುಂದೂಡಬಾರದೇ?

ಅಕ್ಷರ ಗಾತ್ರ

ಧರ್ಮಸ್ಥಳದಲ್ಲಿ ನೀರಿನ ಅಭಾವ ಇರುವುದರಿಂದ ಶ್ರೀಕ್ಷೇತ್ರಕ್ಕೆ ಬರುವ ಭಕ್ತರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಅಲ್ಲಿನ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸೂಚಿಸಿರುವುದು ಸಕಾಲಿಕವಾಗಿದೆ (ಪ್ರ.ವಾ., ಮೇ 18). ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ರಾಜಕೀಯದ ಸುದ್ದಿಗಳನ್ನು ಬಿಟ್ಟರೆ, ಪ್ರಧಾನವಾಗಿ ದೇವಸ್ಥಾನದ ಉದ್ಘಾಟನೆ, ವೈಭವದ ಜಾತ್ರೆ, ದೇವರ ಅದ್ಧೂರಿ ಮೆರವಣಿಗೆಯಂತಹ ಸುದ್ದಿಗಳೇ ಹೆಚ್ಚಾಗಿ ಕಾಣಸಿಗುತ್ತವೆ.

ಧರ್ಮಸ್ಥಳಕ್ಕೆ ಬರುವ ಭಕ್ತರಿಗೇ ಕೆಲ ದಿನಗಳ ನಂತರ ಬರಲು ಸೂಚಿಸುವ ಪರಿಸ್ಥಿತಿ ತಲೆದೋರಿರುವಾಗ, ನಾವೆಲ್ಲ ಜಾತ್ರೆ, ಮೆರವಣಿಗೆಯಂತಹ ಆಚರಣೆಗಳನ್ನು ಕೆಲ ಕಾಲ ಮುಂದೂಡಬಾರದೇಕೆ? ಅದೇ ಹಣವನ್ನು ಕೆರೆಗಳ ಪುನಶ್ಚೇತನದಂತಹ ಜಲ ಕಾಯಕಕ್ಕೆ ಉಪಯೋಗಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT