ಸೋಮವಾರ, ಸೆಪ್ಟೆಂಬರ್ 27, 2021
22 °C

ವೈದ್ಯ ಸೇವೆಗೇ ರೋಗ ತಗುಲಿದರೆ ಉಳಿಗಾಲವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ನಕಲಿ ವೈದ್ಯರ ವಿಷವರ್ತುಲ ಸುದ್ದಿ ಓದಿ (ಪ್ರ.ವಾ, ಮೇ 12) ಆತಂಕವಾಯಿತು. ವೈದ್ಯಕೀಯ ಕ್ಷೇತ್ರದ ಕುರಿತು ದಶಕಗಳ ಹಿಂದೆ ಕೇಳುತ್ತಿದ್ದ ಬೆಚ್ಚಿಬೀಳಿಸುವ ಕತೆಗಳು ಜನರನ್ನು ಆಸ್ಪತ್ರೆಗಳಿಂದ ದೂರ ಇಟ್ಟಿದ್ದವು. ಈ ಕಾಲದಲ್ಲೂ ಇಂತಹ ವೈದ್ಯರ ಜಾಲ ಬಲಿಯುತ್ತಿರುವುದು ಭಯ ಹುಟ್ಟಿಸುತ್ತದೆ. 

ಈ ಸುದ್ದಿಯನ್ನು ಸರ್ಕಾರ ಗಂಭೀರವಾಗಿ‌ ತೆಗೆದುಕೊಂಡು, ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ. ಯಾವ ಸಮಾಜದಲ್ಲಿ ವೈದ್ಯಕೀಯ ಸೇವೆ, ಭ್ರಷ್ಟ ಕೂಪಕ್ಕೆ ತಳ್ಳಲ್ಪಡುತ್ತದೆಯೋ ಆ ಸಮಾಜಕ್ಕೆ ಉಳಿಗಾಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಹುಲಿಕುಂಟೆ ಮೂರ್ತಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು