ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ನೀರಿನ ಭರಾಟೆ ದಂಧೆ

Last Updated 19 ಜನವರಿ 2020, 20:00 IST
ಅಕ್ಷರ ಗಾತ್ರ

‘ಶುದ್ಧ ನೀರಿನ ಘಟಕ’ದ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯನ್ನು ಪತ್ರಿಕೆಯು ಸ್ಪಷ್ಟವಾಗಿ ಅನಾವರಣ ಮಾಡಿದೆ (ಪ್ರ.ವಾ., ಜ. 17). ಲವಣಾಂಶವನ್ನು ಸುಲಭವಾಗಿ ಅಳೆಯುವ ಡಿಜಿಟಲ್ ‘ಟಿಡಿಎಸ್ ಮಾಪಕ’ 200- 300 ರೂಪಾಯಿಗೆ ಸಿಗುತ್ತದೆ. ನಮ್ಮ ಬಳಿ ಅಂಥ ಮೀಟರ್ ಇರಬೇಕು ಅಥವಾ ಪ್ರತಿ ಆರ್‌ಓ ಘಟಕದಲ್ಲೂ ಅದನ್ನು ಕಡ್ಡಾಯವಾಗಿ ಇಟ್ಟಿರಬೇಕು. ಟಿಡಿಎಸ್ (ಕರಗಿದ ಲವಣಾಂಶ) 200ಕ್ಕಿಂತ ಕಡಿಮೆ ಇರುವ ನೀರನ್ನು ಕುಡಿಯಲು ಮತ್ತು ಅಡುಗೆಗೆ ಬಳಸಬಾರದು.

ಎಳೇ ಮಕ್ಕಳು ಮತ್ತು ತೀರಾ ಹಿರಿಯರು ಇರುವ ಕುಟುಂಬಗಳು ಬಳಸುವ ನೀರಿನಲ್ಲಿ ಲವಣಾಂಶ 300 ಇರಬೇಕು (ಕೆಲವರ ಮನೆಯ ಸ್ವಂತದ ಫಿಲ್ಟರ್ ಯಂತ್ರಗಳಿಂದ ಬರುವ ನೀರಿನಲ್ಲಿ ಟಿಡಿಎಸ್ 20ಕ್ಕಿಂತ ಕಡಿಮೆ ಇರುವುದನ್ನು ನಾನು ಮೀಟರ್ ಹಚ್ಚಿ ತೋರಿಸಿ ಎಚ್ಚರಿಸಿದ್ದೂ ಇದೆ. ಅದು ಬ್ಯಾಟರಿಗಳಿಗೆ ಹಾಕುವ ಡಿಸ್ಟಿಲ್ಡ್‌ ವಾಟರ್‌ಗೆ ಸಮ). ಅಂತಹ ಬರಡು ನೀರನ್ನೇ ಸಾರ್ವಜನಿಕ ಆರ್‌ಓ ಘಟಕಗಳ ಬಳಿ ಕ್ಯೂ ನಿಂತು ಜನರು ಅನಾರೋಗ್ಯವನ್ನು ಹೊತ್ತೊಯ್ಯುವುದನ್ನು ನಾವು ದಿನವೂ ಕಾಣುತ್ತೇವೆ. ಅದೇ ನೀರು ಅನಿವಾರ್ಯವೇ ಆಗಿದ್ದರೆ ಅಂತಹ ನೀರಿಗೆ ತುಸು ಗಡಸು ನೀರನ್ನು ಬೆರೆಸಿ ಟಿಡಿಎಸ್ ಮಟ್ಟವನ್ನು 200- 300ಕ್ಕೆ ತಂದು ಬಳಸಬೇಕು.

ಇನ್ನು ಘಟಕಗಳಲ್ಲಿ ವೃಥಾ ಸೋರಿಹೋಗುವ ನೀರಿನಲ್ಲಿ ಲವಣಾಂಶ ದುಪ್ಪಟ್ಟು ಹೆಚ್ಚಿಗೆ ಇದ್ದು, ಅದು ಅಂತರ್ಜಲ ಸೇರಿ ಮುಂದಿನ ಪೀಳಿಗೆಯ ಆರೋಗ್ಯ ಸಮಸ್ಯೆಯನ್ನೂ ದುಪ್ಪಟ್ಟು ಹೆಚ್ಚಿಸಲಿದೆ. ‘ಪ್ರಜಾವಾಣಿ’ ನೀಡಿದ ತಜ್ಞರ ಎಚ್ಚರಿಕೆ ಆದಷ್ಟು ಹೆಚ್ಚು ಜನರನ್ನು ತಲುಪಬೇಕಿದೆ.

–ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT