ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ, ಬಾಲಿವುಡ್ನ ಕೆಲವು ನಟ-ನಟಿಯರು ಶಾರುಕ್ ಅವರಿಗೆ ಬೆಂಬಲ ಸೂಚಿಸಿರುವುದು ವರದಿಯಾಗಿದೆ. ಡ್ರಗ್ಸ್ನಂತಹ ಗಂಭೀರ ಮತ್ತು ಸಮಾಜಘಾತುಕ ಪ್ರಕರಣವನ್ನು ಬಾಲಿವುಡ್ ಅತ್ಯಂತ ಸಹಜವೆಂಬಂತೆ ಪರಿಗಣಿಸಿರುವುದು ಅವರ ಈ ನಡೆಯಿಂದ ತಿಳಿಯುತ್ತದೆ. ಒಂದು ವರ್ಷದಿಂದ ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ದೇಶದ ಯುವಜನರು ಸಿನಿಮಾ ನಟ-ನಟಿಯರನ್ನೇ ಆದರ್ಶವಾಗಿ ಪರಿಗಣಿಸುತ್ತಿರುವ ಸಂದರ್ಭದಲ್ಲಿ ಇದು ಇಡೀ ದೇಶದ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂಬುದನ್ನು ಊಹಿಸುವುದು ಕಷ್ಟವೇನಲ್ಲ. ಹಾಗಾಗಿ ಇಂತಹ ಪ್ರಕರಣಗಳನ್ನು ರಾಷ್ಟ್ರೀಯ ಭದ್ರತೆಗೆ ಮಾರಕವೆಂದು ಪರಿಗಣಿಸಿ, ಯಾವುದೇ ಒತ್ತಡಗಳಿಗೆ ಮಣೆಹಾಕದೆ ಸೂಕ್ತ ಸುಧಾರಣಾ ಕ್ರಮಗಳಿಗೆ ಮುಂದಾಗಬೇಕಿರುವುದು ಈಗಿನ ತುರ್ತು ಅಗತ್ಯವಾಗಿದೆ.

-ರೇಣುಕಾ ಗೊಡಚಿ,ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.