ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಕ್ರಿಯೆ ಬದಲಾಗಲಿ

Last Updated 10 ಡಿಸೆಂಬರ್ 2021, 19:42 IST
ಅಕ್ಷರ ಗಾತ್ರ

ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಮೈಕ್ರೊ ಅಬ್ಸರ್ವರ್ ಆಗಿ ಒಂದು ಮತಗಟ್ಟೆಗೆ ನೇಮಿಸಲಾಗಿತ್ತು. ಅಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮಾತ್ರ ಮತದಾರರು. ಈ ಮತಗಟ್ಟೆಯಲ್ಲಿ ಕೇವಲ ಹನ್ನೆರಡು ಜನ ಮತದಾರರು. ಅದಕ್ಕಾಗಿ ನಿಯೋಜಿಸಿದ ಅಧಿಕಾರಿಗಳ ಸಂಖ್ಯೆ ಎಂಟು! ಚುನಾವಣೆ ತರಬೇತಿ ಹಾಗೂ ಚುನಾವಣೆಗೆ ಎರಡು ದಿನ ಸೇರಿ ಒಟ್ಟು ಮೂರು ದಿನಗಳಿಗೆ ಪ್ರತೀ ಬ್ಯಾಂಕ್ ಶಾಖೆಯಿಂದ ಶೇ 90ರಷ್ಟು ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದರಿಂದ ಬ್ಯಾಂಕಿನ ವಹಿವಾಟಿಗೆ ತೊಂದರೆಯಾಗಿತ್ತು.

ಒಟ್ಟು ತಾಲ್ಲೂಕಿನಲ್ಲಿ ಇರುವ ಮತದಾರರು 348. ಮತಗಟ್ಟೆಗಳ ಸಂಖ್ಯೆ 42. ಇದಕ್ಕಾಗಿ ಚುನಾವಣಾ ಪ್ರಕ್ರಿಯೆಯ ಎಲ್ಲಾ ನಿಯಮಗಳು ಪಾಲನೆಯಾಗಬೇಕು. ಇದರ ಬದಲಾಗಿ ತಾಲ್ಲೂಕು ಮುಖ್ಯಕೇಂದ್ರದಲ್ಲಿ ಒಂದೋ ಎರಡೋ ಮತಗಟ್ಟೆ ಮಾಡಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತದಾನ ಮಾಡಲು ವಾಹನ ವ್ಯವಸ್ಥೆ ಮಾಡಬಹುದಿತ್ತು. ಇದರಿಂದ ಆಡಳಿತ ವೆಚ್ಚ ತಗ್ಗಿಸಬಹುದಿತ್ತಲ್ಲದೆ ಇತರ ಇಲಾಖೆಗಳು ಸುಸೂತ್ರವಾಗಿ ಕೆಲಸ ನಿರ್ವಹಿಸಬಹುದಿತ್ತು.

- ರಾಮಸ್ವಾಮಿ ಕಳಸವಳ್ಳಿ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT