ಭಾನುವಾರ, ಏಪ್ರಿಲ್ 5, 2020
19 °C

ಕಾಡಂಚಿನ ಜನರ ಗೋಳು ಕೇಳುವವರು ಇಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಕಾಡಂಚಿನ ಹಳ್ಳಿಗಳಲ್ಲಿ ಹುಲಿ,ಚಿರತೆ ಮತ್ತು ಆನೆಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಈ ಪ್ರಾಣಿಗಳಿಂದ ರಾಸುಹಾನಿ, ಜನರ ಪ್ರಾಣಹಾನಿ ಮತ್ತು ಬೆಳೆಹಾನಿ ನಿರಂತರವಾಗಿ ನಡೆಯುತ್ತಿದೆ. ರೈತಜೀವನ ಇಷ್ಟು ಹದಗೆಟ್ಟಿದ್ದನ್ನು ನಾಲ್ಕೈದು ದಶಕಗಳಲ್ಲಿ ನಾನು ಕಂಡಿದ್ದಿಲ್ಲ. ‘ಅರಣ್ಯನಾಶ ಹೆಚ್ಚು ಆಗಿರುವುದರಿಂದ ಹೀಗಾಗಿದೆ’ ಎಂದು ಪರಿಸರವಾದಿಗಳು ಹೇಳುತ್ತಾರೆ.

ಅಧಿಕಾರಸ್ಥರು ಏನೂ ಆಗಿಯೇ ಇಲ್ಲ ಎಂಬಂತೆ ತಮ್ಮ ರಾಜಕೀಯ ಮೇಲಾಟಗಳಲ್ಲಿ ಮುಳುಗಿದ್ದಾರೆ. ಜನರ ಬವಣೆಯತ್ತ ಅವರು ದೃಷ್ಟಿ
ಹರಿಸುತ್ತಲೇ ಇಲ್ಲ. ಇದು, ನೋವಿನ ಸಂಗತಿ.

ಕಾಡಂಚಿನ ಹಳ್ಳಿಗಳ ಜನ ಭಯದಲ್ಲಿ ಬದುಕು ಸವೆಸುತ್ತಿದ್ದಾರೆ. ಹಗಲಿನಲ್ಲಿ ಹೊಲ–ತೋಟಕ್ಕೆ ಹೋಗುವುದಕ್ಕೂ ಭಯ ಪಡಬೇಕಾಗಿದೆ. ಯಾವ ದಿಕ್ಕಿನಿಂದ ಏನು ವಕ್ಕರಿಸುತ್ತದೋ ಎಂಬ ಭೀತಿ ನೆರಳಿನಂತೆ ಹಿಂಬಾಲಿಸುತ್ತದೆ. ಅರಣ್ಯದ ಧಾರಣಾ ಶಕ್ತಿಯನ್ನು ವನ್ಯಜೀವಿಗಳ ಪ್ರಮಾಣದ ಜತೆ ಹೋಲಿಸಿ ನೋಡಲಿ. ಹೆಚ್ಚುವರಿ ಪ್ರಾಣಿಗಳನ್ನು ಇತರ ರಾಜ್ಯಗಳ ಅರಣ್ಯಗಳಿಗೆ ಸಾಗಿಸುವ ಸಾಧ್ಯತೆ ಕುರಿತು
ಚಿಂತಿಸಲಿ.

-ರಾಜಾರಾಮ ನಾಯ್ಕ, ಎಚ್‌.ಡಿ. ಕೋಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು