ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಚ್ಚುವಂಥ ಕಾಳಜಿ

Last Updated 13 ಜುಲೈ 2018, 16:07 IST
ಅಕ್ಷರ ಗಾತ್ರ

ಯಲ್ಲಾಪುರ ತಾಲ್ಲುಕು ಇಡಗುಂಜಿಯಲ್ಲಿ ಮಕ್ಕಳು ತಾವು ತಿಂದ ಕಾಡು ಹಣ್ಣಿನ ಬೀಜಗಳನ್ನು ಚೀಲದಲ್ಲಿ ತುಂಬಿಕೊಂಡು ಅರಣ್ಯ ಇಲಾಖೆಗೆ ತಲುಪಿಸುತ್ತಿರುವ ಸುದ್ದಿ (ಪ್ರ.ವಾ., ಜುಲೈ 12) ಓದಿ, ಆ ಮಕ್ಕಳ ಪರಿಸರ ಕಾಳಜಿ ಕಂಡು ಖುಷಿಯಾಯಿತು.

ಪ್ರತಿ ಶಾಲೆಯಲ್ಲೂ ಇಂಥ ಚಟುವಟಿಕೆ ನಡೆದರೆ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ, ಕಾಳಜಿ ಮತ್ತು ಪ್ರೀತಿ ಹುಟ್ಟುವುದರಲ್ಲಿ ಸಂದೇಹವಿಲ್ಲ. ಆ ಮಕ್ಕಳಲ್ಲಿ ಮೂಡಿದ ಪರಿಸರ ಪ್ರೀತಿಯೇ ಮುಂದಿನ ದಿನಗಳಲ್ಲಿ ಪರಿಸರ ರಕ್ಷಿಸುವ, ಕಾಡನ್ನು ಬೆಳೆಸುವ ಕ್ರಾಂತಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಇಂಥ ಕಾಳಜಿ ಮೂಡಿಸುತ್ತಿರುವ ಆರ್‌ಎಫ್‌ಒ ಹೇಮವತಿ ಭಟ್ ಅಭಿನಂದನಾರ್ಹರು.

–ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT