ಮಂಗಳವಾರ, ಏಪ್ರಿಲ್ 20, 2021
27 °C

ಹೊಸ ರೈಲಿನಲ್ಲೂ ರಿಯಾಯಿತಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ಜೂನ್ 29ರಿಂದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಿರುವುದು ಸ್ವಾಗತಾರ್ಹ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ್ದು ಸ್ತುತ್ಯರ್ಹ. ಈ ಹೊಸ ರೈಲಿನಿಂದ ಎರಡೂ ನಗರಗಳ ನಡುವೆ ಮತ್ತು ಹುಬ್ಬಳ್ಳಿ ಜನರಿಗೆ ತುಂಬಾ ಅನುಕೂಲವಾಗಿದೆ. ಆದರೆ ಈ ರೈಲಿನಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡಬೇಕಾದ ಶೇ 40ರಷ್ಟು ರಿಯಾಯಿತಿ ಇಲ್ಲದಿರುವುದು ಅಚ್ಚರಿದಾಯಕ.

ನಾನು ಮತ್ತು ನನ್ನ ಪತ್ನಿ ಜುಲೈ 9ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಮತ್ತು ಅದೇ ರೈಲಿನಲ್ಲಿ 10ರಂದು ಬೆಂಗಳೂರಿಗೆ ವಾಪಸ್ ಪ್ರಯಾಣ ಮಾಡಿದೆವು. ಹಿರಿಯ ನಾಗರಿಕರಾದ ನಮಗೆ ರಿಯಾಯಿತಿ ಸಿಗದೇ ಇದ್ದುದರಿಂದ ನಾವು ಪೂರ್ಣ ಪ್ರಯಾಣ ದರವನ್ನು ತೆರಬೇಕಾಯಿತು.  ಹಿರಿಯ ನಾಗರಿಕರಿಗೆ ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲ ರೈಲುಗಳ ಪ್ರಯಾಣದಲ್ಲಿ ರಿಯಾಯಿತಿ ಇದೆ. ಆದರೆ ಈ ಹೊಸ ರೈಲಿನಲ್ಲಿ ಮಾತ್ರ ಯಾಕಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಸಚಿವರು ಗಮನಹರಿಸಿ, ಹೊಸ ರೈಲಿನಲ್ಲೂ ಏಕರೂಪದ ನಿಯಮ ಅನುಸರಿಸಬೇಕು.

–ಚಂದ್ರಕಾಂತ ಭಂಡಾರಿ, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.