ಬುಧವಾರ, ಮಾರ್ಚ್ 3, 2021
30 °C

ಚಿರತೆ ಜೀವಕ್ಕೆ ಇರಲಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು (ಪ್ರ.ವಾ.‌, ಡಿ. 23) ಸಹಜವಾಗಿ ಖುಷಿ ತಂದಿದೆ. ಆದರೆ ಅವುಗಳ ಸಂಖ್ಯೆಗೆ ಅನುಗುಣವಾಗಿ ಮಾನವ– ವನ್ಯಜೀವಿ ಸಂಘರ್ಷವೂ ಹೆಚ್ಚಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಏಕೆಂದರೆ‌ ಹುಲಿಗಳಂತೆ ಕಾಡಿನಲ್ಲಿ ಅಷ್ಟೇ ವಾಸಿಸುವ ಜಾಯಮಾನ ಚಿರತೆಯದ್ದಲ್ಲ. ಅದು ಹೆಚ್ಚಾಗಿ ಜನರ ವಾಸಸ್ಥಾನಗಳ ಬಳಿ ವಾಸಿಸುವ ಕುಶಾಗ್ರಮತಿ.‌ ಕುರುಚಲು ಕಾಡು, ಕಬ್ಬಿನ ಗದ್ದೆಗಳು, ಪುಟ್ಟ ಗುಡ್ಡಗಳ ಸುತ್ತಮುತ್ತಲಿನಲ್ಲೂ ಅನಾಯಾಸವಾಗಿ ಬದುಕುಳಿಯಬಲ್ಲ ಮತ್ತು ಮನುಷ್ಯನ ಚಟುವಟಿಕೆಗಳು ಹೆಚ್ಚಿರುವ ಪ್ರದೇಶದಲ್ಲೂ ಆಹಾರ ಗಳಿಸಿಕೊಳ್ಳಬಲ್ಲ ಜೀವಿ.

ಕೆಲವೊಮ್ಮೆ ಚಿರತೆಗಳು ನರಹಂತಕಗಳಾಗಿ ಬದಲಾಗುವ ಸಂಭವವೂ‌ ಇರುತ್ತದೆ. ‌ಆದ್ದರಿಂದ ಹೆಚ್ಚುತ್ತಿರುವ ಚಿರತೆಗಳ‌ ಸಂಖ್ಯೆಗನುಗುಣವಾಗಿ ಅವು ನಿರ್ಭಯವಾಗಿ ಬದುಕುಳಿಯಲು ಅವಕಾಶವನ್ನು ನೀಡಬೇಕಿರುವುದು ಅವಶ್ಯಕ. ಈ‌ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಚಿಂತಿಸಬೇಕಾಗಿದೆ. ಅರಣ್ಯದೊಳಗೆ ನಡೆಯುವ ‌ಅನಗತ್ಯ ಕಾಮಗಾರಿಗಳು, ಗಣಿಗಾರಿಕೆ, ರೆಸಾರ್ಟ್ ನಿರ್ಮಾಣದಂತಹ ಅಪಾಯಕಾರಿ ಕಾಮಗಾರಿಗಳನ್ನು ಸರ್ಕಾರಗಳು ತಡೆಯಲೇಬೇಕು. ಇಲ್ಲದಿದ್ದರೆ ಮಾನವ– ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.