ಒಳ್ಳೆಯ ಶಿಕ್ಷಕರನ್ನು ರೂಪಿಸುವುದು ಇಂದಿನ ತುರ್ತು

7

ಒಳ್ಳೆಯ ಶಿಕ್ಷಕರನ್ನು ರೂಪಿಸುವುದು ಇಂದಿನ ತುರ್ತು

Published:
Updated:

‘ಗ್ರಾಮೀಣ ವಾಸ್ತವ ಮತ್ತು ಇಂಗ್ಲಿಷ್ ಮಾಧ್ಯಮ’ (ಪ್ರ.ವಾ., ಡಿ. 22) ಬರಹ ಸಕಾಲಿಕ. ಸಂವಹನಕ್ಕೆ ಭಾಷೆ ಬೇಕು. ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆ, ಸಂಪರ್ಕಕ್ಕಾಗಿ ಜನರಾಡುವ ಇತರ ಭಾಷೆಗಳು, ಕೆಲವು ವ್ಯವಹಾರಗಳಿಗಾಗಿ ಇಂಗ್ಲಿಷ್‌ನಂತಹ ಭಾಷೆ ಬೇಕು.

ಆದರೆ, ಶಾಲೆಯಲ್ಲಿ ಕಲಿಕೆಯ ಮಾಧ್ಯಮವಾಗಿ ಯಾವ ಭಾಷೆ ಸೂಕ್ತ ಎಂದು ನಿರ್ಧರಿಸುವುದು ಭಾರತದಂಥ ದೇಶದಲ್ಲಿ ಅಷ್ಟು ಸರಳ ವಿಷಯವಲ್ಲ. ಅತಿಶುದ್ಧ ಇಂಗ್ಲಿಷ್‌ ಮಾಧ್ಯಮ ಅಥವಾ ಅತಿಶುದ್ಧ ದೇಶಿ ಮಾಧ್ಯಮ ಎರಡೂ ಮಗುವಿಗೆ ಮಾರಕವೇ. ಮಗುವಿನ ಮನಸ್ಸನ್ನು ಗ್ರಹಿಸಿ, ಅದಕ್ಕೆ ಪೂರಕವಾಗಿ ಪಾಠ ಮಾಡುವಂಥ ಶಿಕ್ಷಕರು ಅತಿ ವಿರಳ. ಅಂಥ ಶಿಕ್ಷಕರನ್ನು ತಯಾರು ಮಾಡುವ ವ್ಯವಸ್ಥೆ ನಮ್ಮ ದೇಶದಲ್ಲಿ ಬೆಳೆದಿಲ್ಲ. ಇದು ಈಗಿನ ಸತ್ಯ.

ಕೆ. ಪ್ರಕಾಶ್, ಸೀಗೋಡು, ಬಾಳೆಹೊನ್ನೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !