ಶುಕ್ರವಾರ, ನವೆಂಬರ್ 22, 2019
20 °C

ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ | ವಿಚಾರವಂತರು ಬೇಕಿದೆ

Published:
Updated:

‘ಗಾಂಧಿ ಹತ್ಯೆಗೂ ಗೌರಿ ಹತ್ಯೆಗೂ ವ್ಯತ್ಯಾಸವಿಲ್ಲ, ಇಬ್ಬರ ಸಾವಿಗೂ ನ್ಯಾಯ ದೊರೆತಿಲ್ಲ’ ಎಂದು ಗೌರಿ ನೆನಪು ಮತ್ತು ಎ.ಕೆ.ಸುಬ್ಬಯ್ಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ (ಪ್ರ‌.ವಾ., ಸೆ. 6) ಆತಂಕ ವ್ಯಕ್ತಪಡಿಸುವ ಮೂಲಕ ಕನ್ಹಯ್ಯ ಕುಮಾರ್, ಗೌರಿ ಹತ್ಯೆ ಕುರಿತು ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ ಹಿಡಿದಿದ್ದಾರೆ. ಪ್ರಭುತ್ವವನ್ನು ಪ್ರಶ್ನಿಸುವಂತಹ ವಾತಾವರಣ ಇಲ್ಲವಾಗಿದೆ. ಬಹುಸಂಸ್ಕೃತಿಯನ್ನು ಅಮಾನ್ಯಗೊಳಿಸಿ, ಏಕಸಂಸ್ಕೃತಿ ಹೇರುವ ಪ್ರಯತ್ನಗಳಾಗುತ್ತಿವೆ. ಸರ್ವಾಧಿಕಾರದ ಧೋರಣೆ ಕಾಣಿಸುತ್ತದೆ. ಇದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗಿದೆ. ವಿಚಾರವಂತರು ನಮ್ಮ ಸಮಾಜಕ್ಕೆ ಹಿಂದಿಗಿಂತ ಹೆಚ್ಚಿಗೆ ಈಗ ಬೇಕಾಗಿದೆ.

-ನಾಗರಾಜು, ಬೆಂಗಳೂರು

ಪ್ರತಿಕ್ರಿಯಿಸಿ (+)