ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಈ ‘ಅತಿಥಿ’ಗಳು ಮರೆತುಹೋದರೇ?

Last Updated 23 ಸೆಪ್ಟೆಂಬರ್ 2020, 23:26 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸುಮಾರು 14,000 ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸದ ಧೋರಣೆ ಖಂಡಿಸಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ ಅವರು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಧರಣಿ ಹೂಡಿದಾಗ, ವಿರೋಧ ಪಕ್ಷದ ಸದಸ್ಯರೂ ಅವರಿಗೆ ಬೆಂಬಲ ನೀಡಿದ್ದು ಸ್ಮರಣೀಯ. ಈ ಧರಣಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ಗೌರವಧನ ಪಾವತಿಗೆ ಸೂಚನೆ ನೀಡಿದ್ದು ಸಕಾರಾತ್ಮಕ ನಡೆ.

ಆದರೆ ಈ ಸಂದರ್ಭದಲ್ಲಿ ಇವರೆಲ್ಲರಿಗೂ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮರೆತುಹೋದಂತಿದೆ. ಅತಿಥಿ ಬೋಧಕರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾತ್ರವಲ್ಲ, ವಿಶ್ವವಿದ್ಯಾಲಯಗಳಲ್ಲಿ, ಸರ್ಕಾರದ ಪ್ರಾಥಮಿಕ, ಪ್ರೌಢ ಮತ್ತು ವಸತಿ ಶಾಲೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ತಾರತಮ್ಯರಹಿತವಾಗಿ ವೇತನ ಪಾವತಿಸಬೇಕಲ್ಲವೇ?

ಜನಪ್ರತಿನಿಧಿಗಳು ಕರ್ನಾಟಕದ ಶೈಕ್ಷಣಿಕ ಕಣಜವನ್ನು ಹೀಗೆ ಒಡೆದು ನೋಡದೆ, ಬಾಕಿ ಇರುವ ಈ ಎಲ್ಲರಿಗೂ ಗೌರವಧನ ಪಾವತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು.

-ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT