ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುನಿಟ್ಟಾಗಿ ಜಾರಿ ಆಗಲಿ

Last Updated 23 ಜನವರಿ 2020, 20:18 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮೌಢ್ಯ ನಿವಾರಣೆಗೆ ಕಾಯ್ದೆಯನ್ನು ಜಾರಿಗೆ ತಂದಿರುವುದು ಸಂತೋಷದ ಸಂಗತಿ. ಈಗಿನ ವೈಜ್ಞಾನಿಕ ಯುಗದಲ್ಲೂ ಕೆಲವು ಅನಿಷ್ಟ ಪದ್ಧತಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಈ ಕಾಯ್ದೆಯಿಂದ ಅವುಗಳ ನಿಯಂತ್ರಣವಾದರೆ ಅಷ್ಟೇ ಸಾಕು.ಕಾಯ್ದೆಯು ಕೇವಲ ತೋರಿಕೆಗೆ ಜಾರಿಯಾಗದೆ, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಲಿ. ಕೆಲವೆಡೆ ಜಾತ್ರೆ, ಹಬ್ಬ, ಸಂತೆಯ ಸಮಯದಲ್ಲಿ ಕೆಲವರು ಮಂತ್ರವಾದಿಗಳ ವೇಷ ತೊಟ್ಟು ರಾಜಾರೋಷವಾಗಿ ಜನರಲ್ಲಿ ಮೂಢನಂಬಿಕೆಯನ್ನು ಬಿತ್ತುತ್ತಿದ್ದಾರೆ. ಇಂತಹವರನ್ನು ಮೊದಲು ಶಿಕ್ಷಿಸಬೇಕು.

ಹಳ್ಳಿಗಳ ಕಡೆ ಈಗಲೂ ದೆವ್ವ ಬಿಡಿಸುತ್ತೇನೆಂದು ಹೇಳಿ ಜನಸಾಮಾನ್ಯರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಲಾಗುತ್ತದೆ. ಇನ್ನು ಕೆಲವರು, ದೇವರು ಮೈಮೇಲೆ ಬರುತ್ತದೆಂದು ಹೇಳಿ, ಜನರ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತಿದ್ದಾರೆ.

ಮೂಢನಂಬಿಕೆಗಳ ವಿಚಾರದಲ್ಲಿ ಜನರ ಮನಃಸ್ಥಿತಿಯೂ ಬದಲಾಗಬೇಕು. ಆಗ ಮಾತ್ರ ಮೂಢನಂಬಿಕೆಗಳನ್ನು ಸಮಾಜದಿಂದ ಬೇರು ಸಮೇತ ಕಿತ್ತುಹಾಕಲು ಸಾಧ್ಯ.

–ರಾಜು ಬಿ. ಲಕ್ಕಂಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT