ಶನಿವಾರ, ಜನವರಿ 23, 2021
26 °C

ಮಾಹಿತಿ ಪ್ರವಾಹ ಎದುರಿಸಲು ಸಜ್ಜಾಗಬೇಕಿದೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಮಾಹಿತಿ ಅಜೀರ್ಣಕ್ಕಿದೆ ಡಯಟ್’ ಎಂಬ ಡಾ. ಜ್ಯೋತಿ ಅವರ ಲೇಖನ (ಪ್ರ.ವಾ., ಜ. 9) ವಾಸ್ತವಿಕತೆಯಿಂದ ಕೂಡಿದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಉಕ್ತಿ ಎಲ್ಲರಿಗೂ ತಿಳಿದಿರುವುದೇ. ಇಂದು ಎಲ್ಲ ವ್ಯವಹಾರವೂ ತಂತ್ರಜ್ಞಾನ ಆಧಾರಿತವಾಗಿದೆ. ಅಂತರ್ಜಾಲವು ನಮಗೆ ಇಂದು ಬೆರಳ ತುದಿಯಲ್ಲೇ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ಆಬಾಲವೃದ್ಧರಾದಿಯಾಗಿ ಎಲ್ಲರೂ ಇಂದು ಗೂಗಲ್ಲನ್ನೇ ತಮ್ಮ ಗುರುವಾಗಿ ಸ್ವೀಕರಿಸಿ ತಮಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾರೆ. ಹೀಗೆ ಎಲ್ಲಿಯೂ ಬುದ್ಧಿಶಕ್ತಿ ಬಳಕೆಯಾಗದೆ ಯೋಚನಾಶಕ್ತಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಾಗಿದೆ.

ಅಗತ್ಯ, ಅನಗತ್ಯ ಮಾಹಿತಿ ಪಡೆದೂ ಪಡೆದೂ ಮಕ್ಕಳು ಒತ್ತಡಕ್ಕೆ ಸಿಲುಕಿ, ತಾಳ್ಮೆಗೆಟ್ಟು ಅತಿ ಬೇಗ ಸಿಟ್ಟಿಗೇಳುತ್ತಾರೆ.
ಈ ಮಾಹಿತಿ ಜಗತ್ತು ಮಕ್ಕಳನ್ನು ಆತಂಕ ಹಾಗೂ ಗೊಂದಲಕ್ಕೆ ತಳ್ಳುತ್ತಿದೆ. ಇಂತಹ ಅತಿಯಾದ ಮಾಹಿತಿ ಪ್ರವಾಹದಿಂದ ಉಂಟಾಗುವ ಅಪಾಯವನ್ನು ಎದುರಿಸಲು ಮಕ್ಕಳನ್ನು ನಾವು ಸಜ್ಜುಗೊಳಿಸಬೇಕಾಗಿದೆ. ಈ ಕೆಲಸ ಪ್ರತಿಯೊಂದು ಮನೆಯಲ್ಲೂ ನಡೆಯಬೇಕು. ಪೋಷಕರು ಇದರ ಬಗ್ಗೆ ತುರ್ತಾಗಿ ಗಮನ ಹರಿಸುವುದು ಅತ್ಯಂತ ಅವಶ್ಯಕ.

– ವೀಣಾ ಸುಬ್ರಹ್ಮಣ್ಯ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.