ಸೋಮವಾರ, ಫೆಬ್ರವರಿ 24, 2020
19 °C

ಜುಂಜಪ್ಪನ ಆಶಯಕ್ಕೆ ಆದ್ಯತೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ’ ವತಿಯಿಂದ ಪ್ರತಿವರ್ಷ ಕಾಡುಗೊಲ್ಲರ ಸಾಂಸ್ಕೃತಿಕ ವೀರ ಜುಂಜಪ್ಪನ ಮೂಲ ನೆಲೆಯಾದ ಶಿರಾ ತಾಲ್ಲೂಕಿನ ಜುಂಜಪ್ಪನ ಗುಡ್ಡೆಯಲ್ಲಿ ಹಮ್ಮಿಕೊಳ್ಳುವ ಅಹೋರಾತ್ರಿ ಶಿವೋತ್ಸವ ಕಾರ್ಯಕ್ರಮ ಶ್ಲಾಘನೀಯ. ಆದರೆ ಜುಂಜಪ್ಪ ಒಬ್ಬ ಸಾಂಸ್ಕೃತಿಕ ವೀರ, ಭೂಸುಧಾರಣಾ ಹರಿಕಾರ, ಊಳಿಗಮಾನ್ಯದ ವಿರೋಧಿ, ಮಾನವ ಬದುಕಿಗಿಂತ ಪಶುಗಳ ಬದುಕೇ ಮುಖ್ಯ ಎಂದು ತಿಳಿದು, ಅರಣ್ಯವನ್ನು ಪೋಷಿಸಲು ಜೀವನದಾದ್ಯಂತ ದುಡಿದು ಮಡಿದವನು. ಇಂತಹ ಸಮಾನತೆಯ ಹರಿಕಾರ ಜುಂಜಪ್ಪನ ಆಶಯಗಳನ್ನು ಅಧುನಿಕತೆಗೆ ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಆದ್ಯತೆ ನೀಡುವುದು ಒಳಿತು.

ಉದ್ಯೋಗ, ಗ್ರಾಮೀಣ ಆರ್ಥಿಕತೆಗೆ ಪಶುಪಾಲನೆಯು ಈ ದೇಶದ ಮೂಲ ನೆಲೆ. ಆದ್ದರಿಂದ ಶಿವೋತ್ಸವದ ‘ಗಣೆ ಗೌರವ’ವನ್ನು ಯುವ ಸಾಧಕರಿಗೆ, ತಳವರ್ಗ ಮತ್ತು ಪಶುಪಾಲನಾ ಸಮುದಾಯದ ಬದುಕಿಗಾಗಿ ಹಾಗೂ ಸಾಮಾಜಿಕ ಬದಲಾವಣೆಗಾಗಿ ದುಡಿದವರಿಗೆ ನೀಡಬೇಕು. ಆಗ ಈ ಪ್ರಶಸ್ತಿಯ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

ಜಯರಾಮ ಕೆ. ಜೆನಿಗೆ, ಪಿ.ಗೊಲ್ಲರಹಟ್ಟಿ, ಪಾವಗಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)