ಕೈವಲ್ಯಧಾಮ ಹೇಗಿರಬೇಕು?

ಶನಿವಾರ, ಜೂಲೈ 20, 2019
28 °C

ಕೈವಲ್ಯಧಾಮ ಹೇಗಿರಬೇಕು?

Published:
Updated:

ಇತ್ತೀಚೆಗೆ ನಿಧನರಾದ ಹತ್ತಿರದ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರವು ಬೆಂಗಳೂರಿನ ಹೊರವಲಯದಲ್ಲಿರುವ ಶವಾಗಾರದಲ್ಲಿ ನಡೆಯಿತು. ಅಲ್ಲಿಯ ವಾತಾವರಣ ನೋಡಿ ಮನಸ್ಸಿಗೆ ಬಹಳ ನೋವಾಯಿತು. ಸತ್ತವರನ್ನು ತಂದು ಬಿಸಾಡುವ ಕಸದ ತೊಟ್ಟಿಯಂತೆ ಇದೆ ಆ ಪ್ರದೇಶ. ಒಬ್ಬ ಮನುಷ್ಯ ತನ್ನ ಅಂತಿಮಯಾತ್ರೆಗಾಗಿ ಕೈವಲ್ಯಧಾಮದಲ್ಲಿ ಲೀನವಾಗುವ ಸಂದರ್ಭದಲ್ಲಿ ಅಲ್ಲಿಯ ವಾತಾವರಣ ನಿರ್ಮಲವಾಗಿ ಇರಬೇಕು. ಬದಲಾಗಿ, ಆ ಪ್ರದೇಶವು ದಿಢೀರ್‌ ಉದ್ಭವವಾದ ಕಸದ ತೊಟ್ಟಿಯಂತೆ ಭಾಸವಾಗುತ್ತದೆ.

ನಗರದ ಐದು ಸ್ಮಶಾನಗಳಲ್ಲಿ ಮೆಶ್‌ ಕಾಂಪೋಸ್ಟ್‌ ಘಟಕಗಳ ಅಳವಡಿಕೆ ಹಾಗೂ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಜುಲೈ 3). ಕೈವಲ್ಯಧಾಮದಲ್ಲಿ ಶೇಖರಣೆಗೊಳ್ಳುವ ಹೂವಿನ ಹಾರ, ತೆಂಗಿನ ಗರಿ ಹಾಗೂ ಬಿದಿರನ್ನು ಒಂದೆಡೆ ಹಾಕುವುದರಿಂದ ಗೊಬ್ಬರ ತಯಾರಿಸಬಹುದು ಹಾಗೂ ಆ ಗೊಬ್ಬರ ಬಳಸಿಕೊಂಡು ಅದೇ ಪರಿಸರದಲ್ಲಿ ಹಸಿರು ಉಕ್ಕುವಂತೆ ಮಾಡಬಹುದಲ್ಲವೇ?

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !