ಮಂಗಳವಾರ, ಸೆಪ್ಟೆಂಬರ್ 28, 2021
24 °C

ಕನಕ ಕೇಂದ್ರ: ನಡೆಯಲಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದಿಂದ ಕಾಗಿನೆಲೆಯನ್ನು ಕೇಂದ್ರವಾಗಿಟ್ಟು ಯಾವುದೇ ಕಾರ್ಯಕ್ರಮ ನಡೆದಂತಿಲ್ಲ.  ಕಾಗಿನೆಲೆ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಕನಕದಾಸರ ಕೀರ್ತನೆ, ಕೃತಿಗಳ ಕುರಿತಂತೆ ಚರ್ಚೆಯಾಗಲೀ ಸಂವಾದಗಳಾಗಲೀ ಕಾವ್ಯ-ಕಮ್ಮಟಗಳಾಗಲೀ ಒಂದೆರಡು ವರ್ಷಗಳಿಂದ ನಡೆದಿಲ್ಲ. 

ಕನಕದಾಸರ ಕೃತಿಗಳ ಓದು, ಅರ್ಥೈಸುವಿಕೆಯಂತಹ ಕಾರ್ಯಕ್ರಮಗಳು ನಾಡಿನ ಯುವ ಬರಹಗಾರರು ಸೇರಿದಂತೆ, ಪದವಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಶ್ಯಕ. ಈ ದಿಸೆಯಲ್ಲಿ ‘ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ’ದ ಸಮನ್ವಯಕಾರರು ಅಥವಾ ಅಧ್ಯಕ್ಷರು ಚಿಂತಿಸಿ ಕನಕದಾಸರ ಕೃತಿಗಳ ಕುರಿತು ಹೆಚ್ಚು ಹೆಚ್ಚು ಚರ್ಚಿಸುವ, ಮರು ಓದನ್ನು ಮಾಡುವ, ಅವರ ಕೃತಿಗಳಲ್ಲಿರುವ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯಕ್ರಮಗಳನ್ನು ಕನಕದಾಸ ಅಧ್ಯಯನ ಕೇಂದ್ರದಿಂದ ಮಾಡಬೇಕಾಗಿದೆ.

ಕೋವಿಡ್‌ನಂತಹ ದುರಿತ ಕಾಲದಲ್ಲಿಯೂ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯ-ಕಮ್ಮಟ, ಹಳೆಗನ್ನಡ ಓದು, ಕಥಾ ಕಮ್ಮಟ, ವಿಜ್ಞಾನ ಕಮ್ಮಟ, ಅಡಿಗರ ಜನ್ಮಶತಮಾನೋತ್ಸವ ವಿಚಾರ ಸಂಕಿರಣ... ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಾಡಿನ ಯುವ ಬರಹಗಾರರನ್ನು ಮತ್ತಷ್ಟು ಕ್ರಿಯಾಶೀಲರಾಗಿರುವಂತೆ ಮಾಡಿದೆ. ಆದರೆ, ಮೌಢ್ಯಗಳು, ಕಂದಾಚಾರಗಳು, ಕುಲದ ತಾರತಮ್ಯದ ಕುರಿತಂತೆ ಸಾತ್ವಿಕ ಪ್ರತಿರೋಧ ಒಡ್ಡಿದ ಕನಕದಾಸರ ಅಧ್ಯಯನ ಕೇಂದ್ರದಿಂದ ಕಾರ್ಯಕ್ರಮಗಳು ನಡೆಯದಿರುವುದು ಬರಹಗಾರರು ಮತ್ತು ಓದುಗರಿಗೆ ನೋವನ್ನು ತಂದಿದೆ.

ಮಲ್ಲಪ್ಪ ಫ. ಕರೇಣ್ಣನವರ, ಮೋಟೆಬೆನ್ನೂರು, ಬ್ಯಾಡಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು