ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಬೀತಾಗಲಿ ನಮ್ಮ ರಸ್ತೆಗಳ ಸ್ಥಿತಿ!

Last Updated 4 ಜೂನ್ 2021, 17:47 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ ಕೆ.ಎಸ್.ಆರ್.ಟಿ.ಸಿ. ಎಂದು ಬರೆದುಕೊಳ್ಳುವಂತಿಲ್ಲ. ಲೋಗೊವನ್ನು ಕೂಡಾ ಬದಲಾಯಿಸುವಂತೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಟ್ರೇಡ್‌ ಮಾರ್ಕ್ಸ್‌ ರಿಜಿಸ್ಟ್ರಿ ತೀರ್ಪು ನೀಡಿದೆ. ಕೆಎಸ್‌ಆರ್‌ಟಿಸಿ ಎಂದು ಬಳಸಲು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೇರಳವು ಕರ್ನಾಟಕಕ್ಕಿಂತ ಮೊದಲೇ ಕೆಎಸ್‌ಆರ್‌ಟಿಸಿ ಎಂದು ಬಳಸಲು ಆರಂಭಿಸಿದ್ದರಿಂದ, ಈ ಸಂಬಂಧದ ಪ್ರಕರಣದಲ್ಲಿ ನಾವು ಈಸೀ ರನ್ಔಟ್ ಆಗಬೇಕಾಗಿ ಬಂತು!

ನಮ್ಮ ರಾಜ್ಯದಲ್ಲಿ ಎಲ್ಲ ಕಡೆ ರಸ್ತೆಗಳು ನಿರ್ಮಾಣವಾಗಿಲ್ಲ. ಇರುವ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು (ಎಂ.ಡಿ.ಆರ್) ಸಹ ರಸ್ತೆಗಳ ಹಾಗೆ ಇಲ್ಲ. ಹಾಗಿರುವಾಗ ನಮ್ಮ ಬರಹದಲ್ಲಿ ರಸ್ತೆ ಎಂಬುದನ್ನು ತೆಗೆದುಬಿಟ್ಟರಾಯಿತು! ವಾಸ್ತವ ಸಂಗತಿಯನ್ನೇ ಲೋಗೊ ಪ್ರತಿಬಿಂಬಿಸಲಿ. ಸತ್ಯಮೇವ ಜಯತೆ ಅಲ್ಲವೇ? ಆಗ ನಮ್ಮ ರಸ್ತೆಗಳ ಕುರಿತು ಸತ್ಯಕ್ಕೆ ಜಯ ಸಿಕ್ಕಿದಂತಾಗುತ್ತದೆ! ‘ಕೆ.ಎಸ್.ಟಿ.ಸಿ.’ ಎಂದು ಬರೆದರೆ ಸ್ಪಷ್ಟವಾಗುತ್ತದೆ! ಅಲ್ಲಿ ‘ಟಿ’ಯನ್ನು ಟ್ರಾನ್ಸ್‌ಪೋರ್ಟ್‌ ಎಂದು ಅರ್ಥೈಸಬಹುದು. ಇನ್ನೂ ವ್ಯಂಗ್ಯ ಮಾಡುವವರು ಬೇಕಾದರೆ ‘ಟ್ರೇಡಿಂಗ್’ ಅಂತಲೂ ಹೇಳಿಕೊಂಡಿರಲಿ, ನಮಗೆ ಸಂಬಂಧವಿಲ್ಲ!

-ವಿ.ಕೆ.ವಾಲ್ಪಾಡಿ, ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT