ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಏರಿಸಬೇಕೇ ವಿನಾ ಇಳಿಸುವುದಲ್ಲ

Last Updated 10 ಡಿಸೆಂಬರ್ 2021, 19:42 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಶುಲ್ಕವನ್ನು ಪ್ರಸ್ತುತ ಇರುವ ₹ 500ರಿಂದ 250ಕ್ಕೆ ಇಳಿಸಿ, ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವುದಾಗಿ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ. ಕಸಾಪ ನಿರ್ದಿಷ್ಟ ಉದ್ದೇಶಗಳನ್ನಿಟ್ಟುಕೊಂಡು ಪ್ರಾರಂಭವಾಗಿದ್ದು, ಕೇವಲ ಮತ ಗಳಿಕೆಗಾಗಿ ಸದಸ್ಯತ್ವ ಎನ್ನುವ ಬದಲಿಗೆ ಪ್ರಜ್ಞಾವಂತ ಸದಸ್ಯರ ಕೇಂದ್ರವಾಗಬೇಕು. ಚುನಾವಣೆ, ಸಮ್ಮೇಳನ ಅಲ್ಲದೆ ಇತರ ಮಾಹಿತಿಗಳೂ ದೊರಕುವಂತೆ ಎಲ್ಲ ಸದಸ್ಯರಿಗೆ ಒಂದು ಪತ್ರಿಕೆಯು ಪರಿಷತ್ತಿನಿಂದ ಹೋಗಬೇಕು. ಯಾವ ಸಂಸ್ಥೆಯೇ ಆಗಲಿ ಶುಲ್ಕ ಏರಿಕೆಯ ಕಡೆಗೆ ಗಮನ ಹರಿಸಬೇಕೇ ವಿನಾ ಇಳಿಸುವ ಕಡೆಗೆ ಮನಸ್ಸು ಮಾಡಿದರೆ ಆರ್ಥಿಕ ಹೊರೆಯನ್ನು ಅನುಭವಿಸಬೇಕಾಗುತ್ತದೆ, ಹೆಸರಿಗೆ ಹಾಗೂ ಚುನಾವಣೆಗೆ ಮಾತ್ರ ಸದಸ್ಯರು ಎಂಬಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಶುಲ್ಕ ಇಳಿಸುವ ಹಾಗೂ ಕೋಟಿ ಸದಸ್ಯರ ಯೋಜನೆಯನ್ನು ವಾಸ್ತವ ನೆಲೆಯಲ್ಲಿ ನೋಡುವ ಬಗ್ಗೆ ಆಲೋಚನೆ ನಡೆಯಲಿ.

- ಈ.ಬಸವರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT