ಬುಧವಾರ, ಮೇ 12, 2021
20 °C

ಕಾಶ್ಮೀರಕ್ಕೂ ಪಶ್ಚಿಮಘಟ್ಟದ ಗತಿ ಬಾರದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮಘಟ್ಟದಲ್ಲಿ ಅತಿಯಾದ ಮಾನವ ಹಸ್ತಕ್ಷೇಪದಿಂದ ಕರ್ನಾಟಕ, ಕೇರಳ ಭೂಪ್ರದೇಶದಲ್ಲಿ ಜೋರು ಮಳೆಗೆ ಭೂಕುಸಿತ ಸಂಭವಿಸುತ್ತಿದೆ. ಮುಖ್ಯವಾಗಿ ಅರಣ್ಯನಾಶ, ಗಣಿಗಾರಿಕೆ, ಬೃಹತ್‌ ಕೈಗಾರಿಕೆಗಳು, ರೆಸಾರ್ಟ್‌ಗಳು, ಹೋಮ್‌ ಸ್ಟೇಗಳು, ಕಾಫಿ, ಟೀ ಪ್ಲಾಂಟೇಷನ್‍ಗಳು, ಅಡಿಕೆ ತೋಟಗಳು ಮುಂತಾದವುಗಳಿಂದ ಹಿಡಿತ ಕಳೆದುಕೊಂಡ ಬೆಟ್ಟಗುಡ್ಡಗಳು ಎಲ್ಲೆಂದರಲ್ಲಿ ಕುಸಿಯತೊಡಗಿದ್ದು,  ಎರಡು ವರ್ಷಗಳಿಂದ ಇದರ ತೀವ್ರ ಅನುಭವ ಆಗುತ್ತಿದೆ.

ಈ ದುರಂತದ ಅನುಭವ ಎದುರಿಗಿದ್ದೂ ಕೇಂದ್ರ ಸರ್ಕಾರ ಅತ್ತ ಕಾಶ್ಮೀರ ಕಣಿವೆಯಲ್ಲೂ ಬೃಹತ್ ಕೈಗಾರಿಕಾ ಕಾಮಗಾರಿಗಳನ್ನು ಆರಂಭಿಸಲು ತುದಿಗಾಲ ಮೇಲೆ ನಿಂತಿದೆ. ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳು ಕಣಿವೆಗೆ ಬಂದು ಬಂಡವಾಳ ಹೂಡಲು ಪ್ರೋತ್ಸಾಹಿಸುತ್ತಿದೆ. ಆದರೆ ಈ ಬಗೆಯ ಅಭಿವೃದ್ಧಿ ಮುಂದೊಂದು ದಿನ ಕಾಶ್ಮೀರ ಕಣಿವೆಗೂ ಪಶ್ಚಿಮಘಟ್ಟದ ಗತಿಯನ್ನೇ ತಾರದಿರಲಾರದು ಎಂದು ಹೇಳಲಾಗದು. ಇದಕ್ಕಿಂತ ಕಾಶ್ಮೀರ ಕಣಿವೆಯನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು
ಸರ್ವೋತ್ತಮ.

- ಪ್ರೊ. ಶಿವರಾಮಯ್ಯ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು